ಬಿಗ್ ಬಾಸ್ ಸೀಸನ್ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ಸ್ಪರ್ಧಿಗಳ ನಡುವಿನ ಜಗಳ ಭಾರೀ ಸದ್ದು ಮಾಡುತ್ತಿದೆ. ಲಾಯರ್ ಜಗದೀಶ್ ವರ್ತನೆ ಈಗ ಮನೆಮಂದಿ ತಲೆನೋವಾಗಿದ್ದು, ಸದ್ಯ ಎಲ್ಲರೂ ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.
ಜಗದೀಶ್ ಮನೆ ಮಂದಿಯ ಜೊತೆಗೆ ಸಿಕ್ಕ ಸಿಕ್ಕ ವಿಚಾರಕ್ಕೆ ಜಗಳವೆತ್ತುತ್ತಿದ್ದಾರೆ. ಈ ಕಾರಣದಿಂದ ಉಳಿದ ಸ್ಪರ್ಧಿಗಳಿಗೆ ಅವರ ವರ್ತನೆ ಬೇಸರ ತರಿಸಿದೆ. ಮಾತ್ರವಲ್ಲದೆ ಈ ವಿಚಾರವಾಗಿ ಜಗದೀಶ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮನೆಯ ಮರದ ಕಟ್ಟೆ ಬಳಿ ಅನುಷಾ, ಮೋಕ್ಷಿತಾ, ಚೈತ್ರಾ, ಗೋಲ್ಡ್ ಸುರೇಶ್ ಮತ್ತು ಶಿಶಿರ್ ಚರ್ಚೆ ನಡೆಸುತ್ತಿದ್ದಾರೆ. ಗೌರವ ಕೊಟ್ಟರು ಗೌರವ ಉಳಿಸಿಕೊಳ್ಳುತ್ತಿಲ್ಲ ಎಂದು ಜಗದೀಶ್ ಬಗ್ಗೆ ಮಾತನಾಡುತ್ತಿದ್ದಾರೆ.
ಅತ್ತ ಹಂಸಾ ಮತ್ತು ಗೌತಮಿ ಕೂಡ ಸೋಫಾ ಮೇಲೆ ಕೂಡ ಜಗದೀಶ್ ಬಗ್ಗೆ ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಲಾಯರ್ ಜಗದೀಶ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆಮಂದಿಯ ಕಣ್ಣಿರಿಗೂ ಕಾರಣರಾಗಿದ್ದಾರೆ. ಸದ್ಯ ವಾರದ ಕತೆಯಲ್ಲಿ ಜಗದೀಶ್ ಚರ್ಚೆಗೆ ಮುಖ್ಯ ವಿಷಯವಾಗಲಿದ್ದಾರೆ ಎಂಬ ಅನುಮಾನ ಬಿಗ್ ಬಾಸ್ ಅಭಿಮಾನಿಗಳನ್ನು ಕಾಡುತ್ತಿದೆ.