ನಿರ್ದೇಶಕ ತರುಣ್ ಸುಧೀರ್ ಹಾಗೂ ನಾಯಕಿ ಸೋನಲ್ ಮೊಂಟೆರೋ ಮದ್ವೆಯಾಗ್ತಾರಂತೆ ಅನ್ನೋ ಸುದ್ದಿನಾ ಗ್ಯಾರಂಟಿ ನ್ಯೂಸ್ ಬ್ರೇಕ್ ಮಾಡಿತ್ತು. ಇತ್ತೀಚೆಗೆ ತರುಣ್ ದರ್ಶನ್ ಅವ್ರನ್ನ ಜೈಲಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಮದ್ವೆಗೆ ಆಹ್ವಾನ ನೀಡಲು ಬಂದಿರುವ ವಿಚಾರವನ್ನ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು. ಇವತ್ತು ಅಧಿಕೃತವಾಗಿ ಒಂದು ಬ್ಯೂಟಿಫುಲ್ ವಿಡಿಯೋ ಹಂಚಿಕೊಳ್ಳುವುದರ ಮೂಲಕ ನಾಯಕಿ ಸೋನಲ್ ಜೊತೆಗೆ ಸಪ್ತಪದಿ ತುಳಿಯೋ ವಿಚಾರವನ್ನ ಕನ್ಫರ್ಮ್ ಮಾಡಿದ್ದಾರೆ. ಇದೇ ಆಗಸ್ಟ್ 10 ಮತ್ತು 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್ನಲ್ಲಿ ಮದುವೆ ನಡೆಯಲಿದೆ. ಮದುವೆಗೆ ದರ್ಶನ್ ಬರುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಇದಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ.
ಇನ್ನೂ ಇದೇ ಡೇಟ್ಗೆ ತರುಣ್-ಸೋನಲ್ ಮದ್ವೆಯಾಗ್ತಿರೋದಕ್ಕೆ ಒಂದು ಇಂಟ್ರೆಸ್ಟಿಂಗ್ ಕಾರಣವಿದೆ. ಅದೇನಂದರೆ ಆಗಸ್ಟ್ 11 ನಾಯಕಿ ಸೋನಲ್ ಮಾಂಟೆರೋ ಹುಟ್ಟುಹಬ್ಬ. ಬರ್ತ್ಡೇ ದಿನವೇ ತಮ್ಮ ನೆಚ್ಚಿನ ನಿರ್ದೇಶಕರ ಜೊತೆ ಹಸೆಮಣೆ ಏರ್ತಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುತ್ತಿದ್ದಾರೆ. 1995 ಆಗಸ್ಟ್ 11ರಂದು ಸೋನಲ್ ಮಂಗಳೂರಿನಲ್ಲಿ ಜನಿಸಿದ್ದರು. ಇದೀಗ ಅದೇ ದಿನಾಂಕದಂದು ವೈವಾಹಿಕ ಬದುಕಿಗೆ ಕಾಲಿಡ್ತಿರೋದಕ್ಕೆ ನಾಯಕಿ ದಿಲ್ ಖುಷ್ ಆಗಿದ್ದಾರೆ. ಅಂದ್ಹಾಗೇ, ತರುಣ್ ಹಾಗೂ ಸೋನಲ್ ರಾಬರ್ಟ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಬಹುಷಃ ಶೂಟಿಂಗ್ ಸೆಟ್ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು ಅಂತ ಕಾಣುತ್ತೆ. ಹೀಗಾಗಿ, ತಮ್ಮಿಬ್ಬರ ಪ್ರೀತಿಗೆ ದಾಂಪತ್ಯದ ಮುದ್ರೆ ಹೊತ್ತುತ್ತಿದ್ದಾರೆ. ಹೊಸ ಬಾಳಿನ ಹೊಸಿಲಲ್ಲಿ ನಿಲ್ಲೋದಕ್ಕೆ ಎದುರುನೋಡ್ತಿದ್ದಾರೆ.
ಪ್ರತಿ ಸಿನಿಮಾದಲ್ಲಿಯೂ ತಮ್ಮ ಕ್ರಿಯೆಟಿವಿಟಿ ಮೂಲಕ ಪ್ರೇಕ್ಷಕರ ಮುಂದೆ ಹೊಸ ಹೊಸ ಕಥೆ ತರುವ ನಿರ್ದೇಶಕ ತರುಣ್ ಸುಧೀರ್ ಈಗ ತಮ್ಮ ಜೀವನದ ರಿಯಲ್ ನಾಯಕಿಯನ್ನ ತಮ್ಮದೇ ಸ್ಟೈಲ್ ನಲ್ಲಿ ಕ್ರಿಯೆಟಿವ್ ಆಗಿ ಅಭಿಮಾನಿಗಳಮುಂದೆ ಪ್ರಸೆಂಟ್ ಮಾಡಿದ್ದಾರೆ. ತಮ್ಮ ಪ್ರೀವೆಂಡಿಂಗ್ ವಿಡಿಯೋವನ್ನ ಥಿಯೇಟರ್ ನಲ್ಲಿಯೇ ಶೂಟ್ ಮಾಡಿದ್ದಾರೆ.ಯಸ್, ವರಂಗ್ ಥಿಯೇಟರ್ ನಲ್ಲಿ ಈ ವಿಡಿಯೋ ಶೂಟ್ ಮಾಡಿದ್ದು ಸಿನಿಮಾ ಸೀನ್ ರೀತಿಯೇ ತರುಣ್ ಮತ್ತು ಸೋನಾಲ್ ವಿಡಿಯೋ ಮೂಡಿ ಬಂದಿದೆ…ಸಿನಿಮಾಟೋಗ್ರಾಫರ್ ಎ ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದಾರೆ. ವಿಶೇಷ ಅಂದರೆ ನಿರ್ದೇಶಕ ತರುಣ್ ಚಿಕ್ಕ ವಯಸ್ಸಿನಿಂದಲೂ ನವರಂಗ್ ಥಿಯೇಟರ್ ನಲ್ಲಿ ಸಿನಿಮಾಗಳನ್ನ ನೋಡಿಕೊಂಡು ಬಂದವ್ರು, ಈಗ ತಮ್ಮ ನಿರ್ದೇಶನದ ಸಿನಿಮಾಗಳು ನವರಂಗ್ ಥಿಯೇಟರ್ ನಲ್ಲಿ ಶತದಿನೋತ್ಸವ ಪೂರೈಸಿವೆ..ಹಾಗಾಗಿ ನವರಂಗ್ ಥಿಯೇಟರ್ ನಲ್ಲೇ ತಮ್ಮ ಪ್ರೀವೆಂಡ್ಡಿಂಗ್ ಶೂಟ್ ಮಾಡಿಸಿದ್ದಾರೆ.ಇನ್ನು ಪ್ರೀವೆಡ್ಡಿಂಗ್ ಶೂಟ್ ನಲ್ಲಿ ತರುಣ್ ಮತ್ತು ಸೋನಾಲ್ ಬ್ಲಾಕ್ ಅಂಡ್ ಬ್ಲಾಕ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದು ತರುಣ್ ಅವ್ರಿಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದು ಸೋನಾಲ್ ಅವ್ರಿಗೆ ರಶ್ಮಿ ಅವ್ರು ಡಿಸೈನ್ ಮಾಡಿದ್ದಾರೆ..ಸದ್ಯ ತರುಣ್ ಮತ್ತು ಸೋನಾಲ್ ಮದುವೆ ಸಂಭ್ರಮ ಜೋರಾಗಿದ್ದು ಇಷ್ಟು ದಿನ ಹೀರೋಯಿನ್ ಮತ್ತು ಡೈರೆಕ್ಟರ್ ಆಗಿದ್ದ ಸೋನಾಲ್ ಮತ್ತು ತರುಣ್ ಇನ್ನು ಕೆಲವೇ ದಿನಗಳಲ್ಲಿ ಸತಿ-ಪತಿಗಳಾಗಿ ಜೀವನ ಶುರು ಮಾಡಲಿದ್ದಾರೆ.