ಸದಾ ವಿವಾದದಗಳನ್ನ ಮೈಮೇಲೆ ಎಳೆದುಕೊಳ್ಳುವ ನಟಿ, ಪೊಲಿಟಿಷಿಯನ್ ಕಂಗನಾ ರಣಾವತ್. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತಿದ್ದಾರೆ. ಚುನಾವಣಾ ಕಣದಲ್ಲಿ ಕಂಗನಾ ರಣಾವತ್ ಹಳೇ ಪೋಸ್ಟ್ ಈಗ ಎದುರಾಳಿಗಳಿಗೆ ಅಸ್ತ್ರವಾಗಿದೆ. ಈ ಹಿಂದೆ ಕಂಗನಾ ರಣಾವತ್ ಆಹಾರ ಪದ್ಧತಿ ಅವರವರ ಇಚ್ಛೆ, ನಾನು ಬೀಫ್ ತಿಂದಿದ್ದೇನೆ ಅಂತ ಹೇಳಿದ್ರಂತೆ. ಇದೇ ವಿಚಾರವನ್ನ ಮುಂದಿಟ್ಟು, ಎದುರಾಳಿಗಳು ವಾಗ್ಬಾಣ ಬಿಡುತ್ತಿದ್ದರು.
ಈ ಟೀಕೆಗಳಿಗೆ ತಿರುಗೇಟು ಕೊಟ್ಟಿರುವ ಕಂಗನಾ ರಣಾವತ್, ನಾನು ಹೆಮ್ಮೆಯ ಹಿಂದೂ ಎಂದು ಹೇಳಿಕೊಂಡಿದ್ದಾರೆ. ರೆಡ್ ಮೀಟ್ ತಿನ್ನುತ್ತೇನೆ ಎನ್ನುವ ಆರೋಪದ ಬಗ್ಗೆ Xನಲ್ಲಿ ಪ್ರತಿಕ್ರಿಯೆ ನೀಡಿದ ಕಂಗನಾ ಅವರು ನಾನು ಗೋಮಾಂಸ ಅಥವಾ ಯಾವುದೇ ರೀತಿಯ (red meat/ಬೀಫ್ ) ಮಾಂಸವನ್ನು ಸೇವಿಸುವುದಿಲ್ಲ. ನನ್ನ ಬಗ್ಗೆ ಮಾಡಿರುವ ಆರೋಪ ಆಧಾರರಹಿತ ಅಂತ ಹೇಳಿದ್ದಾರೆ. ನಾನು ದಶಕಗಳಿಂದ ಯೋಗಿಕ್ ಮತ್ತು ಆಯುರ್ವೇದದ ಜೀವನ ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪ, ಕುತಂತ್ರಗಳಿಂದ ನನ್ನ ಹೆಸರಿಗೆ ಮಸಿ ಬಳಿಯೋ ಕೆಲಸ ಆಗುತ್ತಿದೆ, ಇದು ಶೇಮ್ ಫುಲ್ ಅಂತ ಕಿಡಿಕಾರಿದ್ದಾರೆ, ನಾನು ಹೆಮ್ಮೆಯ ಹಿಂದೂ. ನನ್ನ ಬಗ್ಗೆ ನನ್ನ ಜನರಿಗೆ ತಿಳಿದಿದೆ. ಅವರನ್ನು ಯಾರು ದಾರಿ ತಪ್ಪಿಸಲು ಸಾಧ್ಯವಿಲ್ಲ. ಜೈ ಶ್ರೀರಾಮ್ ಎಂದಿದ್ದಾರೆ.