- ದರ್ಶನ್ ಫ್ಯಾನ್ಸ್ಗಳ ವಿರುದ್ಧ ಬಿಗ್ಬಾಸ್ ಸ್ಪರ್ಧಿ ಪ್ರತಾಮ್
- ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದ್ರ ಜೈಲಿಗೆ ಹೋಗಿ
- ಯಾರಿಗೋಸ್ಕರವೋ ಜೀವನ ಹಾಳು ಮಾಡಿಕೊಳ್ಳಬೇಡಿ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ರಾಜ್ಯಾದದ್ಯಾಂತ ಸದ್ದು ಮಾಡ್ತಿದೆ. ಈ ಕೊಲೆ ಪ್ರಕರಣ ಸಂಬಂಧ ಪ್ರತಾಮ್ ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ರು. ಇದೀಗ ದರ್ಶನ್ ಫ್ಯಾನ್ಸ್ಗಳ ವಿರುದ್ಧ ಬಿಗ್ಬಾಸ್ ಸ್ಪರ್ಧಿ ಪ್ರತಾಮ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಜೀವನ ಬಹಳ ದೊಡ್ಡದು. ಯಾರಿಗೋಸ್ಕರವೋ ನೀವು ಅದನ್ನ ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ. ನೀವು ಅತಿಯಾಗಿ ನಮ್ಮ ಕರ್ನಾಟಕದ ಅಳಿಯ ತಂಡದ ಆಫೀಸ್ ನಂಬರ್ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೇ ಬಂದಿದ್ದೀರಾ. ಇನ್ಮೆಲೆ ನನಗೆ ಬರೋ ಕಾಲ್, ಮೇಸೆಜ್ ಅಥವಾ ಸೋಶಿಯಲ್ ಮೀಡಿಯಾ ವಾರ್ನಿಂಗ್ ಎಲ್ಲವೂ ಪೊಲೀಸರು ನೋಡಿಕೊಳ್ತಾರೆ. ಬದುಕು ಸುಂದರವಾದದ್ದು, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ. ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದ್ರ ಜೈಲಿಗೆ ಹೋಗಿ… ಯಾರಿಗೋಸ್ಕರವೋ ಲೈಫ್ ಹಾಳುಮಾಡಿಕೊಳ್ಳಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಾಮ್ ಬರೆದುಕೊಂಡಿದ್ದಾರೆ.