ಸ್ಯಾಂಡಲ್ ವುಡ್ ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರ ಜೊತೆ ಮಾನ್ವಿತಾ ಮದುವೆ ಇಂದು ಅದ್ದೂರಿಯಾಗಿ ಕಳಸದ ಪುರಾತನ ವೆಂಕಟರಮಣ ದೇವಸ್ಥಾನಲ್ಲಿ ನೆರವೇರಿದೆ. ಇಂದು ಮಾನ್ವಿತಾ ಮದುವೆ ಕೊಂಕಣಿ ಸಂಪ್ರದಾಯದಂತೆ ನಡೆದಿದೆ, ಅದಕ್ಕೂ ಮುನ್ನ ಏಪ್ರಿಲ್ 29ರಂದು ಮೆಹೆಂದಿ ಹಾಗೂ 30ರಂದು ಸಂಗೀತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅರುಣ್, ಮಾನ್ವಿತಾ ಮದುವೆಯಲ್ಲಿ ನಿರ್ದೇಶಕ ಮಯೂರ್ ರಾಘವೇಂದ್ರ , ನಟಿ ನಿಧಿ ಸುಬ್ಬಯ್ಯ, ಶೃತಿ ಹರಿಹರನ್ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ರು. ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗಿದ್ದಾರೆ. ಇತ್ತಿಚ್ಚಿಗೆ ಕೆಲ ತಿಂಗಳುಗಳ ಹಿಂದೆ ಅನಾರೋಗ್ಯದಿಂದ ಮಾನ್ವಿತಾ ತಾಯಿ ನಿಧನರಾಗಿದ್ದರು.
ದುನಿಯಾ ಸೂರಿ ನಿರ್ದೇಶನದ ಸೂಪರ್ಹಿಟ್ ಚಿತ್ರ ‘ಕೆಂಡಸಂಪಿಗೆ’ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ನಟಿ ಮಾನ್ವಿತಾ ಕಾಮತ್ ನಂತರ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು. ಇನ್ನೂ ಅರುಣ್ ಕುಮಾರ್ ಕೂಡ ಸಿನಿ ರಂಗದವರೇ ಆಗಿರೋದ್ರಿಂದ ಮದುವೆಯ ನಂತರವೂ ಕೂಡ ನಟಿ ಮಾನ್ವಿತಾ ನಟನೆಯನ್ನ ಮುಂದುವರೆಸುತ್ತಾರೆ.