ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅಮೆರಿಕದಲ್ಲಿ ಕ್ಯಾನ್ಸರ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದ ಒಂದು ತಿಂಗಳ ಬಳಿಕ ಶಿವರಾಜ್ ಕುಮಾರ್ ಅವರು ಬೆಂಗಳೂರಿಗೆ ಇಂದು ವಾಪಸ್ ಆಗಿದ್ದಾರೆ. ಈ ವೇಳೆ ಅವರ ಅಭಿಮಾನಿಗಳು ಅದ್ಧೂರಿಯಾಗಿ ವೆಲ್ಕಮ್ ಮಾಡಿದ್ದಾರೆ . ಕೆಂಪೇಗೌಡ ಅಂತರರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಶಿವಣ್ಣಗೆ ಹೂಮಳೆ ಸುರಿಸಿ, ಕೇಕ್ ಕಟ್ ಮಾಡಿ ಫ್ಯಾನ್ಸ್ ಖುಷಿ ಪಟ್ಟರು.
ಅಮೆರಿಕದಿಂದ ವಾಪಸ್ ಆದ ಬಳಿಕ ಬೆಂಗಳೂರಿನಲ್ಲಿ ಶಿವರಾಜ್ ಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಇಲ್ಲಿಂದ ಹೋಗಬೇಕಾದರೆ ಸ್ವಲ್ಪ ಎಮೋಷನಲ್ ಆಗಿದ್ದೆ. ಆಪರೇಷನ್ ಅಂದರೆ ಅಷ್ಟೂ ಸುಲಭವಲ್ಲ. ಎಲ್ಲರ ಸಪೋರ್ಟ್ ಇದ್ದರೂ ಅಮೆರಿಕಕ್ಕೆ ಹೋಗುವಾಗ ಕೊಂಚ ಭಯ ಇತ್ತು. ಆದರೆ ವೈದ್ಯರು ಮಾತನಾಡಿದ ಮೇಲೆ ಧೈರ್ಯ ಬಂತು ಎಂದು ಹೇಳಿದ್ದಾರೆ.
ಕ್ಯಾನ್ಸರ್ ಹಿನ್ನೆಲೆಯಲ್ಲಿ ಶಿವಣ್ಣ ಅವರು ಅಮೆರಿಕಗೆ ಚಿಕಿತ್ಸೆಗಾಗಿ ಹೋಗಿದ್ದರು. ನಿನ್ನೆ ನಿವಾಸಕ್ಕೆ ಬಂದಿರುವ ಶಿವಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ.
ಹೌದು, ನಿನ್ನೆ ನಟ ಶಿವರಾಜ್ ಕುಮಾರ್ ಅವರು ಅಮೆರಿಕದಿಂದ ವಾಪಸ್ ಬೆಂಗಳೂರಿಗೆ ಬಂದಿದ್ದರು. ಕೆಂಪೇಗೌಡ ಅಂತರರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಶಿವಣ್ಣಗೆ ಹೂಮಳೆ ಸುರಿಸಿ, ಕೇಕ್ ಕಟ್ ಮಾಡಿ ಫ್ಯಾನ್ಸ್ ಖುಷಿ ಪಟ್ಟಿದ್ದರು. ಕ್ಯಾನ್ಸರ್ ಚಿಕಿತ್ಸೆ ಪಡೆದು ವಾಪಸ್ ಆಗಿರುವ ಶಿವರಾಜ್ ಕುಮಾರ್ ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ನೇರವಾಗಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.
ನಟ ಶಿವರಾಜ್ ಕುಮಾರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಆಪರೇಷನ್ ಆದ ನೆಕ್ಸ್ಟ್ ಡೇ ಫೋನ್ ಮಾಡಿದ್ದೆ. ಆಪರೇಷನ್ ಚೆನ್ನಾಗಿ ಆಗಿದೆ. ತೊಂದರೆ ಇಲ್ಲ ಅಂತ ಡಾಕ್ಟರ್ ಹೇಳಿದ್ದಾರೆ. ಈಗ ಆಪರೇಷನ್ ಸಕಸ್ಸ್ ಆಗಿದೆ. ಅವರು ಮುಂದಿನ ತಿಂಗಳಿನಿಂದ ಶೂಟಿಂಗ್ ಎಲ್ಲ ಹೋಗ್ತಾರಂತೆ. ಸದ್ಯಕ್ಕೆ ಶಿವಣ್ಣ ಆರೋಗ್ಯವಾಗಿದ್ದಾರೆ ಎಂದರು.ಇಲ್ಲಿಂದ ಹೋಗಬೇಕಾದರೆ ಸ್ವಲ್ಪ ಎಮೋಷನಲ್ ಆಗಿದ್ದೆ. ಆಪರೇಷನ್ ಅಂದರೆ ಅಷ್ಟೂ ಸುಲಭವಲ್ಲ. ಎಲರ ಸಪೋರ್ಟ್ ಇದ್ದರೂ ಅಮೆರಿಕಕ್ಕೆ ಹೋಗುವಾಗ ಕೊಂಚ ಭಯ ಇತ್ತು. ಆದರೆ ವೈದ್ಯರು ಮಾತನಾಡಿದ ಮೇಲೆ ಧೈರ್ಯ ಬಂತು. ಸಂಬಂಧಿಕರು, ಗೆಳೆಯರು, ವರುಣ್, ಡಿಕೆಡಿ ಬ್ಲಾಕ್ ಇದೆಯಲ್ಲಾ ಅನುಶ್ರೀ, ಹೆಚ್.ಡಿ ಪ್ರಕಾಶ್, ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ, ರಮೇಶ್ ರೆಡ್ಡಿ, ಶ್ರೀಕಾಂತ್, ನಾಗಿ ಸೇರಿ ತುಂಬಾ ಜನ ಹಿಂದೆ ಇದ್ದರು.
ಇದರಿಂದ ಇನ್ನಷ್ಟು ಧೈರ್ಯ ಬಂತು. ಏನ್ ಆಗಬಹುದು, ಹೇಗೆ ಆಗುತ್ತೆ ಎಂಬ ಭಯ ಇತ್ತು. ಡಾಕ್ಟರ್ ಮನು ಅವರು ಹೇಳಿದಂತೆ ನಿಮ್ಮ ಧೈರ್ಯ ಮೆಚ್ಚಲೇಬೇಕು. ಆಸ್ಪತ್ರೆಯಲ್ಲಿ ಎಲ್ಲ ಸರ್ಜರಿ ಮುಗಿದ ಮೇಲೆ 3-4 ದಿನಗಳ ನಂತರ ವರದಿ ಬಂತು. ಅದರಲ್ಲಿ ಕ್ಯಾನ್ಸರ್ ಫ್ರೀ ಅಂತ ವರದಿ ಬಂದಿದ್ದರಿಂದ ಹೆಚ್ಚು ಖುಷಿ ಆಗಿತ್ತು. ಆರು ಸರ್ಜರಿಗಳನ್ನು ಒಟ್ಟಿಗೆ ಮಾಡಿದ್ದಾರೆ. 190 ಸ್ಟಿಚ್ ಹಾಕಿರುವುದು ನನಗೆ ಗೊತ್ತಿಲ್ಲ. ಆಸ್ಪತ್ರೆಯಲ್ಲಿ ಅದೆಲ್ಲಾ ಕೇಳುವ ಪರಿಸ್ಥಿತಿ ಇರಲಿಲ್ಲ. ಡಾಕ್ಟರ್ ಈ ಬಗ್ಗೆ ಯಾವುದನ್ನೂ ನಮ್ಮ ಬಳಿ ಹೇಳಲ್ಲ. ಎರಡನೇ ದಿನದಿಂದ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ, ಅಭಿಮಾನಿಗಳಷ್ಟೇ ಅಲ್ಲ.. ಇಂಡಸ್ಟ್ರೀಯವರು ಧೈರ್ಯ ತುಂಬಿದರು ಎಂದು ಹೇಳಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc