‘ನಟಸೈಫ್ ಅಲಿಖಾನ್ ಅವರಿಗೆ ನಿಜವಾಗಿಯೂ ಚಾಕು ಇರಿಯಲಾಗಿದೆಯೇ ಅಥವಾ ನಟನೆ ಮಾಡುತ್ತಿದ್ದಾರೆಯೇ ಎನ್ನುವುದರ ಬಗ್ಗೆ ಅನುಮಾನವಿದೆ’ ಎಂದು ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸೈಫ್ ಅವರನ್ನು ‘ಕಸ’ಕ್ಕೆ ಹೋಲಿಸಿದ್ದಾರೆ.
ಬಾಂಗ್ಲಾದೇಶಿ ವ್ಯಕ್ತಿಯಿಂದ ಚಾಕು ಇರಿತಕ್ಕೆ ಒಳಗಾದ ಬಳಿಕ ಮುಂಬೈನ ಲೀಲಾವತಿ ಆಸ್ಪತ್ರೆ ಯಿಂದ ಡಿಸ್ಟಾರ್ಜ್ ಆಗಿ ಮನೆಗೆ ಮರಳುವ ವೇಳೆ ಸೈಫ್ ಆರಾಮಾಗಿ ನಡೆದುಕೊಂಡು ಬಂದಿದ್ದು ಕಂಡುಬಂತು.
ಈ ಬಗ್ಗೆ ಗುರುವಾರ ಮಾತನಾಡಿದ ರಾಣೆ, ‘ಸೈಫ್ ಆಸ್ಪತ್ರೆಯಿಂದ ಹೊರಗೆ ಬರುತ್ತಿ ರುವುದು ನೋಡಿದೆ. ಅದು ಅವರು ನಿಜವಾ ಗಿಯೂ ಇರಿತಕ್ಕೆ ಒಳಗಾಗಿದ್ದಾರೆಯೇ ಅಥವಾ ನಟನೆಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಯಿತು. ನಡೆಯುವಾಗ ಅವರು ಡಾನ್ಸ್ ಮಾಡುತ್ತಿದ್ದರು’ ಎಂದರು. ಇನ್ನು ಸೈಫ್ರನ್ನು ಕಸಕ್ಕೆ ಹೋಲಿಸಿದ ರಾಣೆ, ‘ಈ ಮುನ್ನ ಬೀದಿಯಲ್ಲಿದ್ದ ಬಾಂಗ್ಲನ್ನರು ಈಗ ಸೈಫ್ ಮನೆಗೇ ನುಗ್ಗಿದ್ದಾರೆ. ಅವನು ಅವರನ್ನು ಕರೆದೊಯ್ಯಲುಬಂದಿರ ಬಹುದು. ಅದು ಒಳ್ಳೆಯದು. ಕಸವನ್ನು ತೆಗೆದುಕೊಂಡೇ ಹೋಗಬೇಕು’ ಎಂದರು.
ಆಧುನಿಕ ವೈದ್ಯ ಪದ್ಧತಿಯಲ್ಲಿ ಬೇಗ ಗುಣ: ವೈದ್ಯರ ಸ್ಪಷ್ಟನೆ!
ನಟ ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ ಆಗಿ ದ್ದರೂ, ಡಿಸ್ಟಾರ್ಜ್ ಆದ ಬಳಿಕ ಆರಾಮವಾಗಿ ನಡೆದಿದ್ದು ಸಂದೇಹ ಮೂಡಿಸಿದೆ. ಇದರ ಬಗ್ಗೆ ಬೆಂಗಳೂ ರಿನ ವೈದ್ಯ ದೀಪಕ್ ಕೃಷ್ಣಸ್ವಾಮಿ ಸ್ಪಷ್ಟನೆ ನೀಡಿದ್ದು, ‘ಸೈಫ್ಗೆ ಸೆರೆಟ್ರೊ ಸ್ಟೈನಲ್ ದ್ರವದ ದ್ರವದ ಸೋರಿಕೆ ಮತ್ತು ಡ್ಯೂರಮೇಟರ್ನಲ್ಲಿ (ಬೆನ್ನು ಮೂಳೆ ಹಾಗೂ ಮೆದುಳು ರಕ್ಷಿಸುವ ಪೊರೆ) ಹರಿದಿತ್ತು. ಅದನ್ನು ಸರಿಪಡಿಸಲಾಯಿತು. ಆಧುನಿಕ ವೈದ್ಯ ಪದ್ಧತಿ ಯಲ್ಲಿ ಇದನ್ನು ಬೇಗ ಗುಣಪಡಿಸಲು ಸಾಧ್ಯ’ ಎಂದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc