ಬಾಂಗ್ಲಾ ಮೂಲದ ದಾಳಿಕೋರನಿಂದ ನಟ ಸೈಫ್ ಅಲಿ ಖಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ದಾಳಿ ನಂತರ ಮಿಲಿಯನೇರ್ ಸೈಫ್ ನನ್ನು ಒಬ್ಬ ಸಾಮಾನ್ಯ ಆಟೋ ಚಾಲಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಚ್ಚರಿ ಮೂಡಿಸಿತ್ತು.
ನಟನನ್ನು ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆ ಆಟೋ ಚಾಲಕನಿಗೆ ಸೈಫ್ ಆಲಿ ಖಾನ್ ಅವರಿಂದ 50 ಸಾವಿರ ಹಣ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಂಗರ್ ಮಿಕಾ ಸಿಂಗ್ ಒಂದು ಹೇಳಿಕೆ ನೀಡಿದ್ದು, ಸೈಫ್ ಭಾಯ್ ನಿಮ್ಮ ಪ್ರಾಣ ಉಳಿಸಿದ ಆಟೋ ಡ್ರೈವರ್ಗೆ 11 ಲಕ್ಷ ರೂಪಾಯಿ ಕೊಡಿ ಎಂದು ಆಗ್ರಹಿದ್ದಾರೆ.
ಇನ್ಸಾಗ್ರಾಮ್ನಲ್ಲಿ ಸೈಫ್ ಹಾಗೂ ಆಟೋ ಚಾಲಕನ ಫೋಟೊ ಹಂಚಿಕೊಂಡಿದ್ದು. ನಮ್ಮ ದೇಶದ ಸೂಪರ್ಸ್ಟಾರ್ನ್ನು ಉಳಿಸಿದ ಹೆಗ್ಗಳಿಕೆಗೆ ಭಜನ್ ಸಿಂಗ್ ರಾಣಾ ಪಾತ್ರರಾಗಿದ್ದಾರೆ. ಸೈಫ್ ಇವರಿಗೆ ಐವತ್ತು ಸಾವಿರ ರೂಪಾಯಿ ನೀಡಿದ್ದಾರೆ. ಇದು ಸಾಲೋದಿಲ್ಲ ಎಂದು ಹೇಳಿದ್ದಾರೆ.
ಒಂದು ರೂಪಾಯಿಯೂ ಕೇಳದೆ ರಕ್ತ ಸೋರುತ್ತಿದ್ದ ಸಮಯದಲ್ಲಿ ಸೈಫ್ನ್ನು ಆಸ್ಪತ್ರೆ ತಲುಪಿಸಿ ರಾಣಾ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಅವರಿಗೆ ನನ್ನ ಕಡೆಯಿಂದ ಒಂದು ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಮಿಕಾ ಸಿಂಗ್ ಹೇಳಿಕೊಂಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc