- ಸ್ನೇಹಿತೆಯರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿ ಸಂಭ್ರಮಿಸಿದ ಆಮಿ
- ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜತೆ ಮದುವೆಯಾಗಲು ಸಿದ್ದರಾದ ಆಮಿ ಜಾಕ್ಸನ್
ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಆಮಿ ಜಾಕ್ಸನ್. ಮದುವೆಗೂ ಮುನ್ನ ತನ್ನ ಸ್ನೇಹಿತೆಯರ ಜೊತೆ ಪ್ರೈವೇಟ್ ಜೆಟ್ನಲ್ಲಿ ಬ್ಯಾಚುಲರ್ ಪಾರ್ಟಿಯನ್ನು ಮಾಡಿ ಸಂಭ್ರಮಿಸಿದ್ದಾರೆ. ಈ ಬ್ಯಾಚುಲರ್ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಆಮಿ ಜಾಕ್ಸನ್ ಮದುವೆ ಮುನ್ನವೇ ಗರ್ಭಿಣಿಯಾಗುವ ಮೂಲಕ ಅನೇಕರನ್ನು ನಿಬ್ಬೇರಗಾಗಿಸಿದ್ದರು. 2018 ರಿಂದ ಈಚೆಗೆ ಆಮಿ ಜಾಕ್ಸನ್ ಅವರು ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿರುವ ಅವರು ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.
ಉದ್ಯಮಿ ಜಾರ್ಜ್ ಪನಯಿಟೋ ಜೊತೆ ಕೈ ಹಿಡಿದು ಸುತ್ತಾಡ್ತಾನೇ, ಮದುವೆ ಮುನ್ನವೇ ಗಂಡು ಮಗುಗೆ ಜನ್ಮ ನೀಡಿದ್ದ ಆಮಿ, ತಮ್ಮಿಬ್ಬರ ಪ್ರೀತಿಯ ಸಂಕೇತವಾದ ಮಗನಿಗೆ ಆಂಡ್ರಿಯಾಸ್ ಎಂದು ನಾಮಕರಣ ಮಾಡಿ, ಜಾರ್ಜ್ ಜೊತೆ ಸಂಬಂಧ ಕಡಿದುಕೊಂಡರು. ತಮ್ಮ ಇನ್ಸ್ಟಾಗ್ರಾಂನಲ್ಲಿ ಜಾರ್ಜ್ ಜೊತೆ ಇದ್ದ ತಮ್ಮ ಫೋಟೋಗಳನ್ನೆಲ್ಲಾ ಡಿಲೀಟ್ ಮಾಡಿದ್ದರು.
ಮದುವೆ ಮುನ್ನವೇ ಗಂಡು ಮಗುವಿಗೆ ಜನ್ಮ ನೀಡಿದ್ದ ಆಮಿ ಜಾಕ್ಸನ್, ಜಾರ್ಜ್ ಜೊತೆ ಸಂಬಂಧ ಕಡಿದುಕೊಂಡರು. ಹೀಗೆ ಜಾರ್ಜ್ ಇಂದ ದೂರವಾದ ಆಮಿ ಜಾಕ್ಸನ್ ಈ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜತೆ ಮದುವೆಯಾಗಲು ಸಿದ್ದರಾಗಿದ್ದಾರೆ.