ನಟ ದರ್ಶನ್ ಒಬ್ಬ ಕ್ರಿಮಿನಲ್, ಕೊಲೆಗಾರ, ಕೇಡಿ, ಪಾಪಿ ಅಂತೆಲ್ಲ ಕರೆಯೋದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ಕಾರಣ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನ ಮುಗಿಸಿರೋ ಡಿಗ್ಯಾಂಗ್ ಗೆ ಕೋರ್ಟ್ ಮತ್ತೆ 14 ದಿನ ಶಿಕ್ಷೆ ವಿಧಿಸಿದೆ. ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯೋ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದ್ಹಾಗೇ, ದರ್ಶನ್ ಅವರಿಗೆ ಈ ಸ್ಥಿತಿ ಬಂದೊದಗಿದ್ದನ್ನ ಕಂಡು ಕೆಲವರು ಮರುಗ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯೋ? ಅಪರಾಧಿಯೋ ಕೋರ್ಟ್ ತೀರ್ಮಾನ ಮಾಡುತ್ತೆ.ಆದರೆ, ನಾವು ಕಂಡಂತೆ ದರ್ಶನ್ ಹೇಗೆ ಅನ್ನೋದನ್ನ ಕೆಲ ನಟ ನಟಿಯರು ಮಾಧ್ಯಮಗಳ ಮುಂದೆ ಹೇಳಿಕೊಳ್ತಿದ್ದಾರೆ. ತಾರಕ್ ಚಿತ್ರದಲ್ಲಿ ದಚ್ಚುಗೆ ಜೋಡಿಯಾಗಿದ್ದ ಸುಂದರಿ ಶಾನ್ವಿ ಶ್ರೀವಾಸ್ತವ್ ಗ್ಯಾರಂಟಿ ನ್ಯೂಸ್ ಚಾನಲ್ ಜೊತೆ ತಮ್ಮ ಒಪಿನಿಯನ್ ಶೇರ್ ಮಾಡ್ಕೊಂಡಿದ್ದಾರೆ.
ತಾರಕ್ ಸಿನಿಮಾದಲ್ಲಿ ದರ್ಶನ್ ಸರ್ ಜೊತೆ ಆ್ಯಕ್ಟ್ ಮಾಡಿದ್ದೀನಿ. ದರ್ಶನ್ ಅವ್ರು ದೊಡ್ಡ ಸೂಪರ್ ಸ್ಟಾರ್. ಅವ್ರನ್ನ ತುಂಬಾ ಗೌರವಿಸ್ತೀನಿ, ಶೂಟಿಂಗ್ ಸಮಯದಲ್ಲಿ ದಚ್ಚು ಜೊತೆ ನನ್ನ ಎಕ್ಸ್ ಪಿರಿಯನ್ಸ್ ಸೂಪರ್ ಆಗಿತ್ತು. ಚಿತ್ರೀಕರಣ ವೇಳೆ ನಾನು ನಿಂತ್ಕೊಂಡಿದ್ದೆ ಆಗ ಅವರು ಕುಳಿತುಕೊಂಡಿದ್ದ ಚೇರ್ ನಂಗೆ ಬಿಟ್ಕೊಟ್ಟು ಅವರು ನಿಂತ್ಕೊಂಡರು. ಇದು ಅವರು ಹೆಣ್ಮಕ್ಳಿಗೆ ಎಷ್ಟು ಗೌರವ ಕೊಡ್ತಾರೆ ಅನ್ನೋದನ್ನ ತೋರಿಸುತ್ತೆ. ಅಷ್ಟಕ್ಕೂ, ಈ ಕೊಲೆ ಪ್ರಕರಣ ಕುರಿತು ನಾನೇನು ಹೇಳಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯಿದೆ. ತೀರ್ಪು ಬರುವವರೆಗೂ ಕಾಯೋಣ ಎಂದರು.
ಇದೇ ವೇಳೆ ಸೋಷಿಯಲ್ ಮೀಡಿಯಾನ ಮಿಸ್ ಯೂಸ್ ಮಾಡ್ಕೊಂಡು ಹೆಣ್ಮಕ್ಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ನಟಿ ಶಾನ್ವಿ ತಿರುಗೇಟು ಕೊಡುವ ಕೆಲಸ ಮಾಡಿದರು. ಹೆಣ್ಣನ್ನ ಗೌರವಿಸದೇ ಕೆಟ್ಟದಾಗಿ ಕಮೆಂಟ್ ಮಾಡಿದ್ರೆ ಅದು ಅವರ ವ್ಯಕ್ತಿತ್ವ ಎಂತಹದ್ದು ಅನ್ನೋದು ತೋರಿಸುತ್ತೆ. ಅಂತವರನ್ನ ಏನು ಮಾಡೋಕೆ ಆಗಲ್ಲ, ಹೀಗಾಗಿ ಇಗ್ನೋರ್ ಮಾಡಿ ಒಳ್ಳೆಯದರ ಕಡೆ ಗಮನ ಕೊಡಬೇಕು ಎಂದರು
ಇನ್ನೂ ಶಾನ್ವಿ ವಾರಣಾಸಿಯ ಬೆಡಗಿ. ಚಂದ್ರಲೇಖ ಚಿತ್ರದಿಂದ ಚಂದನವನ ಪ್ರವೇಶಿಸಿದ ಶಾನ್ವಿ, ರಾಕಿಂಗ್ ಸ್ಟಾರ್ ಯಶ್ ಜತೆ ಮಾಸ್ಟರ್ ಪೀಸ್, ಮುರುಳಿ ಜೊತೆ ಮಫ್ತಿ, ದರ್ಶನ್ ಜೊತೆ ತಾರಕ್, ಕಿಚ್ಚ ಸುದೀಪ್ ಅವರ ವಿಲನ್, ಗಣಿ ಜೊತೆ ಗೀತಾ, ರಕ್ಷಿತ್ ಜೊತೆ ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದರು. ಸ್ಯಾಂಡಲ್ ವುಡ್ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿ ಶೈನ್ ಆದರು. ಸದ್ಯ ಕನ್ನಡ ಸೇರಿ ಮರಾಠಿ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ.