ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್, ಪೂನಂ ಸಿರ್ನಾಯಕ್ ಹಾಗೂ ಫವಾಜ್ ಆಶ್ರಫ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪಾರು ಪಾರ್ವತಿ’ “ಸಿನಿಮಾ ಜ.31ಕ್ಕೆ ರಿಲೀಸ್ ಆಗಲಿದೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಚಿತ್ರದ ಭಾಗದಂತಿದ್ದು, ಬೆಂಗಳೂರಿನ ಉತ್ತರಹಳ್ಳಿಯಿಂದ ಉತ್ತರಾಖಂಡ್ವರೆಗೆ ಸಂಚರಿಸಿದ ಕಾರನ್ನು ಚಿತ್ರತಂಡ ಪರಿಚಯಿಸಿತು. ಈ ಬಗ್ಗೆ ವಿವರ ನೀಡಿದ ನಿರ್ದೇಶಕ ರೋಹಿತ್ ಕೀರ್ತಿ, ‘ನಮ್ಮ ಸಿನಿಮಾದ ಪ್ರಮುಖ ಪಾತ್ರಧಾರಿಗಳು ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಆಶ್ರಫ್. ಇವರೊಟ್ಟಿಗೆ ಮತ್ತೊಂದುಮಹತ್ವದ ಪಾತ್ರ ವಹಿಸಿದ್ದು ಕಾರು. ಇದು ಪ್ರಯಾಣದ ಕಥಾಹಂದರ ಹೊಂದಿರುವ ಚಿತ್ರ. ಈಗ ಈ ಕಾರು ಪ್ರಚಾರದ ಸಲುವಾಗಿ ಕರ್ನಾಟಕಾದ್ಯಂತ ಚಲಿಸಲಿದೆ’ ಎಂದರು.
ನಾಯಕಿ ದೀಪಿಕಾ ದಾಸ್, ‘ಇದೊಂದು ಪ್ರಯಾಣ ಹಾಗೂ ಅಡ್ಡೆಂಚರ್ ಕಥನ ಹೊಂದಿರುವ ಚಿತ್ರ. ಕಾರಿನ ಜೊತೆಗೆ ಕರ್ನಾಟಕದಿಂದ ಉತ್ತರ ಖಂಡದವರೆಗೂ ಎಂಟು ರಾಜ್ಯಗಳನ್ನು ಸಂಚರಿಸಿದ ಅನುಭವ ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಪಾತ್ರದ ಹೆಸರು ಪಾಯಲ್ ‘ ಎಂದರು. ಪಿ.ಬಿ.ಪ್ರೇಮನಾಥ್ ಈ ಸಿನಿಮಾ ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ರೋಹಿತ್, “ಇದೊಂದು ಟ್ರಾವೆಲ್ ಅಡ್ವೆಂಚರ್ ಡ್ರಾಮ ಜಾನರ್ನ ಸಿನಿಮಾ. ನಮ್ಮ ಚಿತ್ರ ಮೂರು ಪ್ರಮುಖ ಪಾತ್ರಗಳ ಜೊತೆಗೆ ಸಾಗುತ್ತದೆ. ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಆಶ್ರಫ್ ಮೂರು ಪ್ರಮುಖ ಪಾತ್ರಧಾರಿಗಳು. ಇವರೊಟ್ಟಿಗೆ ಮತ್ತೂಂದು ಪ್ರಮುಖ ಪಾತ್ರವೆಂದರೆ ಅದು ಕಾರು. ಟ್ರಾವೆಲ್ ಕಥಾಹಂದರದ ಚಿತ್ರವಾಗಿರುವುದರಿಂದ ಕಾರು ಸಹ ಚಿತ್ರದಲ್ಲಿ ಪ್ರಮುಖವಾಗಿದೆ. ಜನವರಿ 31ರಂದು ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಸಂಕ್ರಾಂತಿ ಹಬ್ಬದಂದು ಚಿತ್ರದ ಟ್ರೇಲರ್ ಅನಾವರಣವಾಗಲಿದೆ.
ಈಗ ಈ ಕಾರು ಪ್ರಚಾರದ ಸಲುವಾಗಿ ಕರ್ನಾಟಕದಾದ್ಯಂತ ಚಲಿಸಲಿದೆ. ಯೂಟ್ಯೂಬರ್ ಶ್ರೀಕಾಂತ್ ಅವರು ಕಾರನ್ನು ಚಲಿಸಿಕೊಂಡು ಪಯಣಿಸಲಿದ್ದಾರೆ’ ಎಂದರು.“ಈ ಚಿತ್ರದಲ್ಲಿ ಬರೀ ಪ್ರವಾಸ ಮಾತ್ರ ಇಲ್ಲ. ಪ್ರೇಕ್ಷಕರು ಕುಟುಂಬ ಸಮೇತ ನೋಡಬಹುದಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಇನ್ನು ಕಾರಿನ ಜೊತೆಗೆ ಕರ್ನಾಟಕದಿಂದ ಉತ್ತರಾಖಂಡ ರಾಜ್ಯದವರೆಗೂ ಎಂಟು ರಾಜ್ಯಗಳನ್ನು ಸಂಚರಿಸಿದ ಅನುಭವ ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಾಯಲ್ ನನ್ನ ಪಾತ್ರದ ಹೆಸರು’ ಎನ್ನುವುದು ನಾಯಕಿ ದೀಪಿಕಾ ದಾಸ್ ಅವರ ಮಾತು.