ಬಿಗ್ಬಾಸ್ ಸೀಸನ್ 11 ಕೊನೆಯ ಹಂತಕ್ಕೆ ತಲುಪಿದೆ. ಗ್ರ್ಯಾಂಡ್ ಫಿನಾಲೆಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿ ಇದೆ. ಗೆಲುವಿಗಾಗಿ ಇಷ್ಟು ದಿನಗಳ ಕಾಲ ನಡೆದ ಜಿದ್ದಾಜಿದ್ದಿನ ಪೈಪೋಟಿ ಅಂತಿಮ ಹಂತಕ್ಕೆ ಬಂದು ನಿಂತಿದೆ.
ಭವ್ಯ ಗೌಡ, ಹನುಮಂತ, ತ್ರಿವಿಕ್ರಮ, ರಜತ್, ಮಂಜು, ಮೋಕ್ಷಿತ ಫಿನಾಲೆ ವಾರಕ್ಕೆ ಎಂಟ್ರಿ ಆಗಿದ್ದಾರೆ. ಈ ಆರು ಮಂದಿಯಲ್ಲಿ ಟ್ರೋಫಿ ಒಬ್ಬರ ಕೈಸೇರಲಿದೆ. ಕಿಚ್ಚನ ಕೈಯಿಂದ ಟ್ರೋಫಿ ಎತ್ತಿ ಹಿಡಿಯೋರು ಯಾರು ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ವೀಕ್ಷಕರು ಮುಂದಿನ ಶನಿವಾರ, ಭಾನುವಾರ ನಡೆಯಲಿರುವ ಫಿನಾಲೆಗಾಗಿ ಕಾದು ಕೂತಿದ್ದಾರೆ.
ಬಿಗ್ಬಾಸ್ ಸೀಸನ್ 11 ಕೊನೆಯ ಹಂತಕ್ಕೆ ತಲುಪಿದೆ. ಗ್ರ್ಯಾಂಡ್ ಫಿನಾಲೆಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿ ಇದೆ. ಗೆಲುವಿಗಾಗಿ ಇಷ್ಟು ದಿನಗಳ ಕಾಲ ನಡೆದ ಜಿದ್ದಾಜಿದ್ದಿನ ಪೈಪೋಟಿ ಅಂತಿಮ ಹಂತಕ್ಕೆ ಬಂದು ನಿಂತಿದೆ.
ಭವ್ಯಾ ಗೌಡರು ಬಿಗ್ ಬಾಸ್ ಕನ್ನಡದಲ್ಲಿ ತಮ್ಮ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದಾರೆ. ವಾರದ ದಿನಗಳಲ್ಲಿ ಅವರು ತೀವ್ರವಾಗಿ ಸ್ಪರ್ಧಿಸುತ್ತಾರೆ, ಆದರೆ ವಾರಾಂತ್ಯದಲ್ಲಿ ಕಣ್ಣೀರಿನ ಮೂಲಕ ಪ್ರತಿಕ್ರಿಯಿಸುತ್ತಾರೆ. ಕೆಲವರು ಅವರದ್ದು ಕೇವಲ ನಾಟಕ ಎಂದು ಹೇಳಿದ್ದು ಇದೆ. ಅವರ ವರ್ತನೆಯಲ್ಲಿನ ಈ ವ್ಯತ್ಯಾಸವೇ ಚರ್ಚೆಯ ವಿಷಯವಾಗಿದೆ.
ಭವ್ಯಾ ಗೌಡ ಅವರು ದೊಡ್ಮನೆಯಲ್ಲಿ ತಮ್ಮ ಆಟದ ಮೂಲಕ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ನಲ್ಲಿ ಮೂರು ಬಾರಿ ಕ್ಯಾಪ್ಟನ್ ಆಗುವ ಮೂಲಕ ಈ ಸೀಸನ್ನಲ್ಲಿ ಅತಿ ಹೆಚ್ಚು ಕ್ಯಾಪ್ಟನ್ ಆದ ಸ್ಪರ್ಧಿ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಈ ಮಧ್ಯೆ ಅವರ ಸ್ಪೆಷಾಲಿಟಿ ಬಗ್ಗೆ ಚರ್ಚೆ ನಡೆಯುತ್ತಿದೆ.
ಭವ್ಯಾ ಗೌಡ ಅವರು ವಾರದ ದಿನಗಳಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಯಾವುದೇ ಸ್ಪರ್ಧಿ ಮಾತನಾಡಲು ಬಂದರೆ ಅವರಿಗೆ ತಿರುಗೇಟು ನೀಡುತ್ತಾರೆ. ಯಾರಾದರೂ ಅವರ ವಿರುದ್ಧ ಮಾತನಾಡುವ ಪ್ರಯತ್ನ ಮಾಡಿದರೆ ಅವರನ್ನು ಕಿಂಡಲ್ ಮಾಡುತ್ತಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc