ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11- 16ನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ 6 ಜನ ಉಳಿದುಕೊಂಡಿದ್ದಾರೆ. ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೂ 3 ದಿನಗಳು ಬಾಕಿ ಉಳಿದಿದೆ. ಈ ಟೆನ್ಷನ್ನಲ್ಲಿರುವ ಸ್ಪರ್ಧಿಗಳಿಗೆ ಫುಲ್ ಜೋಶ್ ತುಂಬಲು ಮನೆಗೆ ಮಜಾ ಟಾಕೀಸ್ನ ಕಾಮಿಡಿ ಕಲಾವಿದರ ಎಂಟ್ರಿಯಾಗಿದೆ.
ಹನುಮಂತು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ, ರಜತ್ ಹಾಗೂ ಮಂಜು ಈ ಸ್ಪರ್ಧಿಗಳ ಎದೆಯಲ್ಲಿ ನಡುಕ ಆರಂಭವಾಗಿದೆ. ಫಿನಾಲೆಯಲ್ಲಿ ನಾನು ಗೆಲ್ಲುತ್ತೇನೆ ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇದೆ. ಇದರ ಮಧ್ಯೆ ಮನೆಗೆ ಮಜಾ ಟಾಕೀಸ್ ಕಾಮಿಡಿ ಕಲಾವಿದರು ಎಂಟ್ರಿಯಾಗಿದೆ. ಕುರಿ ಪ್ರತಾಪ್, ಪ್ರಿಯಾಂಕ, ಚಂದ್ರಪ್ರಭಾ, ಗೊಬ್ಬರ ಸೇರಿ ಇನ್ನಷ್ಟು ಕಲಾವಿದರು ಮನೆಗೆ ಬಂದು ಎಲ್ಲರನ್ನು ನಕ್ಕು ನಗಿಸಿದ್ದಾರೆ. ಕಾಮಿಡಿಯ ಮಸ್ತ್ ಡೈಲಾಗ್ಸ್ ಹೊಡೆದು, ಮ್ಯೂಸಿಕ್ಗೆ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ಈಗ ಫಿನಾಲೆ ವಾರಕ್ಕೆ ಕೇವಲ 6 ಸ್ಪರ್ಧಿಗಳು ಮಾತ್ರ ಇದ್ದಾರೆ. ಇದರಲ್ಲಿ ಒಬ್ಬರು ಮಾತ್ರ ವಿನ್ನರ್ ಆಗಲಿದ್ದಾರೆ. ಇವರಲ್ಲಿ ಇರುವ ಒತ್ತಡ, ಟೆನ್ಷನ್, ಯೋಚನೆ ಈ ಎಲ್ಲವನ್ನು ಹೋಗಲಾಡಿಸಿ ಸ್ಪರ್ಧಿಗಳನ್ನು ಹ್ಯಾಪಿ ಮೂಡ್ಲ್ಲಿ ಇರುವಂತೆ ಮಾಡಲು ಮಜಾ ಟಾಕೀಸ್ ಕಲಾವಿದರು ಮನೆಯಲ್ಲಿ ಮಸ್ತ್ ಮಜಾ ಮಾಡಿದ್ದಾರೆ.
ಇನ್ನು ಅಂದ್ಹಾಗೆ ಫ್ರೆಬ್ರುವರಿ 1 ರಿಂದ ಮಜಾ ಟಾಕೀಸ್ ಆರಂಭವಾಗಲಿದೆ ಎಂದು ಬಿಗ್ಬಾಸ್ ಮನೆಯಲ್ಲಿ ಹಿಂಟ್ ಕೊಟ್ಟಿದ್ದಾರೆ. ಅಂದರೆ ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆ ಮಜಾ ಟಾಕೀಸ್ ಆರಂಭವಾಗುತ್ತದೆ. ಕನ್ನಡಿಗರನ್ನು ನಕ್ಕು ನಗಿಸುವ ಈ ಶೋ ಈ ಬಾರಿ ಮತ್ತಷ್ಟು ಮೆರಗು ತರುವುದಂತೂ ಪಕ್ಕಾ ಆಗಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc