ಬಿಗ್ ಬಾಸ್ ಮನೆಯಲ್ಲಿ ಭವ್ಯ ಹಾಗೂ ತ್ರಿವಿಕ್ರಂ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಇಬ್ಬರೂ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಇಷ್ಟು ದಿನ ಇದ್ದಿದ್ದ ಸ್ನೇಹವನ್ನು, ಅವರ ಜೊತೆ ಸೇರಿಕೊಂಡು, ನನ್ನನ್ನ ಆಚೆ ಇಡುತ್ತೀಯಾ. ಈಗ ನನಗೆ ಎಲ್ಲ ಗೊತ್ತಾಗಿದೆ.
ಈ ಬಗ್ಗೆ ಭವ್ಯಾ ಅವರು ಕನ್ವಿನ್ಸ್ ಮಾಡಲು ಬಂದಾಗ ತ್ರಿವಿಕ್ರಮ್ ಅವರು, ನೀವೇನು ನನಗೆ ಹೇಳೋದು? . ‘ನಿಮ್ಮ ಬಂಡವಾಳ ಗೊತ್ತಾಯ್ತು, ಪುಂಗಬೇಡ ಎಂದಿದ್ದಾರೆ. ಫಸ್ಟ್ ಡೇ ಇದ್ದ ಹಾಗೇ ನೀನಿಲ್ಲ ಎಂದು ಭವ್ಯಾಗೆ ನೇರವಾಗಿ ಹೇಳಿದ್ದಾರೆ ತ್ರಿವಿಕ್ರಮ್.
ಈ ಸೀಸನ್ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಆರಂಭದಿಂದಲೂ ಒಬ್ಬರಿಗೊಬ್ಬರು ಎಂಬಂತೆ ಅಂಟಿಕೊಂಡೇ ಇದ್ದರು. ಆಟದಲ್ಲಿ ಆಗಿರಬಹುದು, ಪ್ರತಿಯೊಂದು ವಿಚಾರದಲ್ಲೂ ಒಬ್ಬರನ್ನೂ ಬಿಟ್ಟು ಕೊಡುತ್ತಿರಲಿಲ್ಲ. ಆದರೆ ಈಗ ಕಿಚ್ಚನ ಮುಂದೆಯೇ ಭವ್ಯಾ ಅವರು ನನ್ನ ಆಟಕ್ಕೆ ತೊಂದರೆ ಆಗುತ್ತಿರೋದೇ ತ್ರಿವಿಕ್ರಮ್ ಎಂದಿದ್ದಾರೆ.
ಭವ್ಯಾ ಅವರು ತ್ರಿವಿಕ್ರಮ್ ನನ್ನ ಆಟಕ್ಕೆ ಅಡಚಣೆ ಆಗಿದ್ದಾರೆ ಎಂದಿದ್ದಾರೆ. ಅವರು ಬಳಕೆ ಮಾಡುವ ಸ್ಟ್ರಾಟಜಿ ಹಾಗೇ ಪದಗಳು ನನ್ನ ಆಟಕ್ಕೆ ತೊಂದರೆ ಉಂಟು ಮಾಡುತ್ತಿದೆ ಎಂದರು. ಇದಕ್ಕೆ ತ್ರಿವಿಕ್ರಮ್ ಅವರು ಮಾರಿ ಹಬ್ಬ ಶುರುವಾಗಿದೆ.
ಅದರ ಬಣ್ಣ ಕಾಣುಸುತ್ತಿದೆ ಎಂದಿದ್ದಾರೆ. ಅದೇ ರೀತಿ ಗೌತಮಿ, ಮಂಜು ಅವರು ಹನುಮಂತ ಅವರು ಅಡಚಣೆ ಎಂದರು. ಗೆಲುವು ಅಂತ ನೋಡಿದಾಗ ಅವರೇ ಅಡ್ಡ ಎನ್ನಿಸುತ್ತಿದೆ ಎಂದರು. ಅದೇ ರೀತಿ ಹನುಮಂತ ಕೂಡ ನಾನು ಆಟ ಶುರು ಮಾಡಿ ತುಂಬ ದಿನ ಆಯ್ತು. ಆದರೀಗ ಇವರಿಗೆ ಅರ್ಥ ಆಗಿದೆ ಎಂದರು.
ಶನಿವಾರದ ಎಪಿಸೋಡ್ ಪ್ರಸಾರವಾದಾಗ ಸುದೀಪ್ ಆಗಮಿಸುವ ಮೊದಲು ಹಿಂದಿನ ನಡೆದ ಕೆಲವು ಘಟನೆಗಳನ್ನು ತೋರಿಸಲಾಯ್ತು. ಅದರಲ್ಲೂ ಭವ್ಯಾ ತ್ರಿವಿಕ್ರಮ್ ಮಾತನಾಡಿರುವ ದೃಶ್ಯ ಪ್ಲೇ ಆಗಿದೆ. ಸ್ಪರ್ಧಿಗಳ ಪೋಷಕರು ಮನೆಗೆ ಬಂದಾಗ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರ ಮನೆಯವರೂ ಸಹ ಪರಸ್ಪರರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು.
ಇನ್ನು ನಿನ್ನೆಯ ಟಾಸ್ಕ್ನಲ್ಲಿಆಟ ಮುಗಿದ ಬಳಿಕ ವಾಶ್ ರೂಮ್ ಏರಿಯಾದಲ್ಲಿ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಮಾತುಕತೆ ನಡೆದಿತ್ತು. ನಾನು ಸೋತ ತಕ್ಷಣ ನಿನ್ನ ರಿಯಾಕ್ಷನ್ ಹೇಗಿತ್ತು ಅನ್ನೋದನ್ನು ನೋಡ್ದೆ ಎಂದು ತ್ರಿವಿಕ್ರಮ್ ತಿಳಿಸಿದ್ದು, ಭವ್ಯಾ ಅಸಮಾಧಾನಗೊಂಡಿದ್ದರು.
ನಂತರ ರಜತ್ ಬಳಿ ಏನ್ ಆಡ್ತಾರೆ ಜನ ಎಂದು ತ್ರಿವಿಕ್ರಮ್ ತಮ್ಮ ಅಸಮಾಧಾನಗಳನ್ನು ಹೊರಹಾಕುತ್ತಿದ್ದಂತೆ ಮೈಂಡ್ ಯುವರ್ ಲ್ಯಾಂಗ್ವೇಜ್ ಎಂದು ಭವ್ಯಾ ತಿಳಿಸಿದ್ದರು, ಶನಿವಾರದ ಎಪಿಸೋಡ್ನಲ್ಲಿ ಇಬ್ಬರೂ ಪ್ರೀತಿ-ಪ್ರೇಮದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅದಾದ ಎರಡೇ ದಿನಕ್ಕೆ ಇಬ್ಬರೂ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಸೆಮಿ ಫಿನಾಲೆ ಆಟ ಶುರು ಆಗಿದೆ. ಮಣ್ಣು ಮುಕ್ಕಿಸೋಕೆ ಸ್ಕೆಚ್ ಕೂಡ ರೆಡಿ ಆದಂತೆ ಇದೆ. ಇದರ ಮಧ್ಯೆ ಬಿಗ್ ಬಾಸ್ ಒಂದು ಸತ್ಯ ಹೇಳಿ ಬಿಟ್ಟಿದ್ದಾರೆ. ಮಿಡ್ ವೀಕ್ ಅಲ್ಲಿಯೇ ಒಬ್ರು ಮನೆಗೆ ಹೋಗ್ತಾರೆ ಅನ್ನೋದೇ ಆ ವಿಷಯ ಆಗಿದೆ.