ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ದೊಡ್ಮನೆಯಲ್ಲಿ ಸೆಮಿ ಫಿನಾಲೆ ಆಟ ಶುರು ಆಗಿದೆ. ಇದರ ಮಧ್ಯೆ ಬಿಗ್ ಬಾಸ್ ಒಂದು ಸತ್ಯ ಹೇಳಿ ಬಿಟ್ಟಿದ್ದಾರೆ. ಮಿಡ್ ವೀಕ್ ಅಲ್ಲಿಯೇ ಒಬ್ರು ಮನೆಗೆ ಹೋಗ್ತಾರೆ ಅನ್ನೋದೇ ವಿಷಯ ಆಗಿದೆ. ದಿನ ಪ್ರೋಮೋದಲ್ಲಿ ಸೆಮಿ ಫಿನಾಲೆ ಆಟದ ಝಲಕ್ ತೋರಲಾಗಿದೆ. ಮಿಡ್ ವೀಕ್ ಯಾರು ಮನೆಗೆ ಹೋಗ್ತಾರೆ ಅಂತಲೇ ಚರ್ಚೆ ಮಾಡುತ್ತಿದ್ದಾರೆ. ಇದರ ನಡುವೆ ಮನೆಯಲ್ಲಿ ಸೆಮಿ ಫೈನಲ್ ಆಟ ನಡೆಯುತ್ತಿದೆ.
ಇನ್ನೇನೂ 2 ವಾರಗಳಲ್ಲಿ ಬಿಗ್ಬಾಸ್ ಸೀಸನ್ ಮುಕ್ತಾಯಗೊಳ್ಳಲಿದೆ. ಇದೇ ಹೊತ್ತಲ್ಲಿ ಭಾನುವಾರದ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದರು.
ಯಾವ ಸ್ಪರ್ಧಿ, ಯಾವಾಗ ಬೇಕಾದರೂ ಬಿಗ್ಬಾಸ್ ಮನೆಯಿಂದ ಆಚೆ ಹೋಗಬಹುದು. ಹೀಗಾಗಿ ಬಿಗ್ಬಾಸ್ ಕಾಲ ಕಾಲಕ್ಕೆ ಕೊಡುವ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೇ ಆ ಸ್ಪರ್ಧಿ ನಾಮಿನೇಷನ್ನಿಂದ ಪಾರಾಗುವ ಸಾಧ್ಯತೆ ಇದೆ. ಹೀಗಾಗಿ ಸ್ಪರ್ಧಿಗಳು ಸಖತ್ ಅಲರ್ಟ್ ಆಗಿದ್ದಾರೆ.
ಸದ್ಯ ಬಿಗ್ಬಾಸ್ ಮನೆಯಲ್ಲಿ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಆಗಲಿದೆ ಎಂದು ಖುದ್ದು ಬಿಗ್ಬಾಸ್ ಮನೆ ಮಂದಿಗೆ ಶಾಕ್ ಕೊಟ್ಟಿದ್ದಾರೆ. ಬಿಗ್ಬಾಸ್ ಹೇಳಿಕೆಯನ್ನು ಕೇಳಿ ಇಡೀ ಮನೆ ಮಂದಿ ಮನಸ್ಸಲ್ಲಿ ಭಯ ಶುರುವಾಗಿದೆ.
ಆದ್ರೆ ಇದರ ಮಧ್ಯೆ ಕಲರ್ಸ್ ಕನ್ನಡ ವಾಟ್ಸಾಪ್ ಚಾನೆಲ್ನಲ್ಲಿ ವೋಟಿಂಗ್ ಪೋಲ್ ಹಾಕಿದ್ದಾರು. ಅದರಲ್ಲಿ ಈ ವಾರ ಯಾರ ಆಟಕ್ಕೆ ಫುಲ್ ಸ್ಟಾಪ್ ಸಿಗುತ್ತೆ ಅಂತ ಪ್ರಶ್ನೆಯೊಂದನ್ನು ಕೇಳಿದ್ದರು. ಅದರಲ್ಲಿ ಅತಿ ಹೆಚ್ಚಾಗಿ ಗೌತಮಿ ಜಾಧವ್ಗೆ ವೋಟ್ಸ್ ಬಂದಿದೆ. ವೋಟಿಂಗ್ ಪೋಲ್ನಲ್ಲಿ ಕ್ಯಾಪ್ಟನ್ ಹನುಮಂತನನ್ನು ಬಿಟ್ಟು ಉಳಿದ 7 ಸ್ಪರ್ಧಿಗಳ ಹೆಸರನ್ನು ಹಾಕಿದ್ದರು.
ಆ 7 ಸ್ಫರ್ಧಿಗಳಲ್ಲಿ ಈ ವಾರ ಯಾರ ಆಟಕ್ಕೆ ಫುಲ್ ಸ್ಟಾಪ್ ಸಿಗುತ್ತೆ ಎಂಬ ಪ್ರಶ್ನೆಗೆ ಅತಿ ಹೆಚ್ಚು ಜನರು ಗೌತಮಿ ಜಾಧವ್ ಹೆಸರಿಗೆ ವೋಟ್ ಹಾಕಿದ್ದಾರೆ. ಹೀಗಾಗಿ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಗೌತಮಿ ಬಿಗ್ಬಾಸ್ನಿಂದ ಆಚೆ ಬರುತ್ತಾರಾ ಎಂದು ಕಾದು ನೋಡಬೇಕಿದೆ.