ಕರ್ನಾಟಕದಲ್ಲಿ ಹಿಂದಿ ಭಾಷಿಗರ ದಬ್ಬಾಳಿಕೆ ಹೆಚ್ಚಾಗಿದ್ದು, ಕನ್ನಡ ಮಾತಾನಾಡು ಎಂದಿದ್ದಕ್ಕೆ ಕನ್ನಡಿಗನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಹೆಸರಘಟ್ಟ ರಸ್ತೆಯ ಗಬ್ರು ಹೋಟೆಲ್ನಲ್ಲಿ ನಡೆದಿದೆ.
ಹೋಟೆಲ್ನಲ್ಲಿ ನಾಲ್ಕೈದು ಹಿಂದಿ ಭಾಷಿಗರ ಯುವಕರಿಗೆ ಕನ್ನಡದಲ್ಲಿ ಮಾತನಾಡಲು ಹೇಳಿದ ಕನ್ನಡಿಗನ ಮೇಲೆ ದೌರ್ಜನ್ಯ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಘಟನೆಯ ನಂತರ, ಆರೋಪಿಗಳು ಹೋಟೆಲ್ನಿಂದ ಹೊರ ಹಾಕಲಾಯಿತು ಎನ್ನಲಾಗಿದೆ. ಇದಕ್ಕೆ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ
ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾದ ಮಾಹಿತಿಯ ಪ್ರಕಾರ, ಹೋಟೆಲ್ನಲ್ಲಿ ಕನ್ನಡದಲ್ಲಿ ಮಾತಾಡುವಂತೆ ಕೋರಿದ ಕನ್ನಡಿಗನನ್ನು ಹಿಂದಿ ಯುವಕರು ಹಲ್ಲೆ ಮಾಡಿದರು. “ಕನ್ನಡ ಮಾತನಾಡು” ಎಂದು ಹೇಳಿದ್ದಕ್ಕೆ ಅವರು ಹಲ್ಲೆ ಮಾಡಿದರೆಂದು ಕನ್ನಡಿಗ ದೂರಿದ್ದಾರೆ. ಇದು ಕೇವಲ ಭಾಷಾ ವಿವಾದವಲ್ಲ, ಬಹುಸಾಂಸ್ಕೃತಿಕ ನಗರದಲ್ಲಿ ಸ್ಥಳೀಯ ಭಾಷೆ-ಸಂಸ್ಕೃತಿಗೆ ಇರುವ ಗೌರವದ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ.
ಸಾಮಾಜಿಕ ಮಾಧ್ಯಮದ ಪ್ರತಿಕ್ರಿಯೆ:
ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದೆ. ಈ ಬಗ್ಗೆ ನಾಗರಿಕರು, ಸಾಹಿತ್ಯಕರ್ಮಿಗಳು ಮತ್ತು ರಾಜಕೀಯ ನಾಯಕರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬೆಂಗಳೂರಿನ ಭಾಷಾ ಸಂವೇದನಾಶೀಲತೆ ಮತ್ತು ಸಾಮರಸ್ಯದ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ.
ಕನ್ನಡಿಗರ ಹಕ್ಕುಗಳನ್ನು ಕಾಪಾಡುವುದು ಕರ್ನಾಟಕದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಸಂಘಟನೆಗಳು ಒತ್ತಿಹೇಳಿವೆ. “ನಾವು ಹಿಂದಿ ಅಥವಾ ಇತರ ಭಾಷೆಗಳ ವಿರೋಧಿಗಳಲ್ಲ, ಆದರೆ ಸ್ಥಳೀಯ ಭಾಷೆಗೆ ಗೌರವ ಅಗತ್ಯ” ಎಂದು ಸ್ಥಳೀಯ ಯುವಕರು ತಮ್ಮ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಘಟನೆಯ ನಂತರ ಪೊಲೀಸರು ಪ್ರಕರಣವನ್ನು ನೋಂದಾಯಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹೋಟೆಲ್ ಮ್ಯಾನೇಜ್ಮೆಂಟ್ ಸಹ ಸಹಕರಿಸುತ್ತಿದೆ ಎಂದು ತಿಳಿದುಬಂದಿದೆ
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc