ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಗೊಳಿಸಿರುವ ಬೆಂಗಳೂರು ಜಲಮಂಡಳಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ನಿಯಮ ಪಾಲನೆ ಮಾಡುವ ಅಪಾರ್ಟ್ಮೆಂಟ್ಗಳಿಗೆ ಮಾತ್ರ ಕಾವೇರಿ ನೀರಿನ ಸಂಪರ್ಕ ನೀಡಲು ಮುಂದಾಗಿದೆ.
17 ವರ್ಷಗಳಿಂದ ಕಾವೇರಿ ನೀರಿಗಾಗಿ ಕಾದಿದ್ದ ನಗರದ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಕುಡಿಯುವ ಸೌಭಾಗ್ಯ ಸಿಕ್ಕಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಸಂಪರ್ಕ ಪಡೆದಿರುವ 55 ಸಾವಿರ ಸಂಪರ್ಕಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಮಾಡಲು ಮುಂದಾಗಿರುವ ಜಲಮಂಡಳಿ, ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ 15 ರಿಂದ 30 ದಿನಗಳ ಒಳಗೆ ಸಂಪರ್ಕ ನೀಡಲು ಸಜ್ಜಾಗಿದೆ. ಆದರೆ, ಈ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ಗಳಲ್ಲಿ ಎನ್ಜಿಟಿ ನಿಯಮ ಪಾಲನೆ ಆಗುತ್ತಿದ್ದರೆ ಮಾತ್ರ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಜಲಮಂಡಳಿ ನಿರ್ಧಾರ ಮಾಡಿದೆ.
ಪೈಪ್ಲೈನ್ ನೆಟ್ವರ್ಕ್ನಿಂದ ದೂರದಲ್ಲಿರುವ ಮತ್ತು 2020 ರ ನಂತರ ನಿರ್ಮಿಸಲಾದ ಕಟ್ಟಡಗಳು ಅಥವಾ ಅಪಾರ್ಟ್ಮೆಂಟ್ಗಳಿಗೆ 3 ರಿಂದ 4 ತಿಂಗಳ ನಂತರ ಕಾವೇರಿ ಸಂಪರ್ಕವನ್ನು ಒದಗಿಸಲಾಗುತ್ತದೆ. “2020 ರ ನಂತರ ಬಂದಿರುವ ಮತ್ತು ಮುಂದಿನ ತಿಂಗಳು ಹೆಚ್ಚುವರಿ ಪ್ಯಾಕೇಜ್ನ ಭಾಗವಾಗಿ ನಮ್ಮ ನೆಟ್ವರ್ಕ್ ಲೈನ್ಗಳಿಂದ ದೂರವಿರುವ ಈ ಎಲ್ಲಾ ಮನೆಗಳು ಮತ್ತು ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ಸಂಪರ್ಕಿಸಲು ನಾವು ಪೈಪ್ಲೈನ್ ಕೆಲಸವನ್ನು ಕೈಗೆತ್ತಿಕೊಳ್ಳುತ್ತೇವೆ ಮತ್ತು ಈ ನೆಟ್ವರ್ಕ್ ಲೈನ್ಗಳನ್ನು ಸ್ಥಾಪಿಸಿದ ನಂತರ, ಅವುಗಳನ್ನು ಸಹ ಒದಗಿಸಲಾಗುವುದು. ಸಂಪರ್ಕದೊಂದಿಗೆ,” ರಾಮ್ ಪ್ರಸಾತ್ ಹೇಳಿದರು.
ಸಂರ್ಪಕಕ್ಕೆ ಯಾವುದೇ ಏಜೆನ್ಸಿ ಅಥವಾ ಏಜೆಂಟ್ಗಳನ್ನು ನಿಯೋಜಿಸಿಲ್ಲ. ಜಲಮಂಡಳಿಯ ನೋಂದಾಯಿತ ಪ್ಲಂಬರ್ಗಳಿದ್ದಾರೆ. ಅವರು ನಮ್ಮ ಸಿಬ್ಬಂದಿಯ ನೇತೃತ್ವದಲ್ಲಿ ಸಂಪರ್ಕದ ಕಾಮಗಾರಿ ನಡೆಸಲಿದ್ದಾರೆ. ಅಲ್ಲದೆ, ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ಒದಗಿಸಲು ನೆರವಿನ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಹಾಗಾಗಿ, ಯಾವುದೇ ಮಧ್ಯವರ್ತಿಗಳ ಮೊರೆ ಹೋಗದಂತೆ ಜಲಮಂಡಳಿ ಕೋರಿದೆ.
ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಿಗಾಗಿ 755 ಎಂಎಲ್ಡಿ ನೀರು ಹೆಚ್ಚುವರಿಯಾಗಿ ಸಿಗಲಿದೆ. ಇದನ್ನು 4 ಲಕ್ಷ ಸಂಪರ್ಕ ಮತ್ತು 50 ಲಕ್ಷ ಜನರಿಗೆ ಪೂಧಿರೈಧಿಸುವ ಗುರಿಯಿದೆ. ಆದರೆ, ಸದ್ಯ ಈ ವ್ಯಾಪ್ತಿಯ 53 ಹಳ್ಳಿಗಳಲ್ಲಿ55 ಸಾವಿರ ಸಂಪರ್ಕಗಳು ಮಾತ್ರ ಇರುವುದರಿಂದ 755 ಎಂಎಲ್ಡಿ ಪೈಕಿ ಪ್ರಧಿಸ್ತುತ 150 ಎಂಎಲ್ಡಿ ಮಾತ್ರ ಪಂಪ್ ಮಾಡಲಿದೆ. ಈ ಪ್ರಮಾಣದ ನೀರು ಈಗಿರುವ ಸಂಪರ್ಕಗಳಿಗೆ ಸಾಕಾಗಲಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.ಕಾವೇರಿ 5ನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ 110 ಹಳ್ಳಿಗಳಲ್ಲಿ55 ಸಾವಿರ ಸಂಪರ್ಕಗಳಿವೆ. ಸಧಿದ್ಯ ಸಂಪರ್ಕಕ್ಕೆ ಸುಮಾರು 25 ಸಾವಿರ ಹೊಸ ಅರ್ಜಿಗಳು ಬಂದಿವೆ. ಈಗಾಗಲೇ ಸಂಪರ್ಕ ಪಡೆದಿರುವವರಿಗೆ ಅವರ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ, ಸಂಪರ್ಕ ಪಡೆಯುವಂತೆ ಅಭಿಯಾನವೂ ಶುರುವಾಗಲಿದೆ. ಉಳಿದ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಎನ್ಜಿಟಿ ನಿಯಮ ಪಾಲಿಸುವ ಅಪಾರ್ಟ್ಮೆಂಟ್ಗಳನ್ನು ಮಾತ್ರ ಕಾವೇರಿ ನೀರಿನ ಸಂಪರ್ಕಕ್ಕೆ ಪರಿಗಣಿಸಲಾಗುವುದು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.