- ಐಪಿಎಲ್ನ 68ನೇ ಪಂದ್ಯದಲ್ಲಿ CSK ವಿರುದ್ಧ RCB ಗೆ ಭರ್ಜರಿ ಜಯ
- ಧೋನಿ RCB ಆಟಗಾರರೊಂದಿಗೆ ಹಸ್ತಲಾಘವ ಮಾಡಿರಲಿಲ್ಲ ಎಂಬುದೇ ಅಚ್ಚರಿ
- ಧೋನಿಯ ನಡೆಯ ಬಗ್ಗೆ ಭಾರೀ ಆಕ್ರೋಶಗಳು ವ್ಯಕ್ತ
IPL 2024 RCB vs CSK: ಐಪಿಎಲ್ನ 68ನೇ ಪಂದ್ಯದಲ್ಲಿ CSK ವಿರುದ್ಧ RCB ತಂಡ ಜಯ ಸಾಧಿಸಿದ ಬಳಿಕ ಮಹೇಂದ್ರ ಸಿಂಗ್ ಧೋನಿ RCB ಆಟಗಾರರೊಂದಿಗೆ ಹಸ್ತಲಾಘವ ಮಾಡಿರಲಿಲ್ಲ ಎಂಬುದೇ ಅಚ್ಚರಿ. ಇದೀಗ ಧೋನಿಯ ನಡೆಯ ಬಗ್ಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಪಂದ್ಯ ಮುಗಿದ ಬಳಿಕ CSK ಆಟಗಾರರು ಹಸ್ತಲಾಘವ ನೀಡಲು ಸರದಿ ಸಾಲಿನಲ್ಲಿ ಸಾಗಿದ್ದರು. ಈ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂಚೂಣಿಯಲ್ಲಿದ್ದರು. ಆದರೆ ಅತ್ತ ರಣರೋಚಕ ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿದ್ದ RCB ಆಟಗಾರರು ಸಂಭ್ರಮದಲ್ಲಿದ್ದರು.
ಇದೇ ವೇಳೆ RCB ಆಟಗಾರರನ್ನು ಕಾಯದೇ ಮಹೇಂದ್ರ ಸಿಂಗ್ ಧೋನಿ ಪೆವಿಲಿಯನ್ನತ್ತ ಮರಳಿದ್ದಾರೆ. ಈ ವೇಳೆ ಎದುರಿಗೆ ಸಿಕ್ಕ RCB ಸಿಬ್ಬಂದಿಗಳಿಗೆ ಹಸ್ತಲಾಘವ ನೀಡುವ ಮೂಲಕ ಧೋನಿ ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ದಾರೆ. ಇದೀಗ RCB ಆಟಗಾರರಿಗೆ ಧೋನಿ ಶೇಕ್ ಹ್ಯಾಂಡ್ ನೀಡದೇ ತೆರಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.