ಬೆಂಗಳೂರಿನಲ್ಲಿ ಈ ವರ್ಷ 1 49 694 ಟ್ರಿಪಲ್ ರೈಡಿಂಗ್ ಪ್ರಕರಣಗಳು ದಾಖಲಾಗಿವೆ. ಟ್ರಿಪಲ್ ರೈಡಿಂಗ್ ವರ್ಷಕಳೆದಂತೆ ಎಷ್ಟು ಡೇಂಜರ್ ಆಗ್ತಿದೆ ಅಂದ್ರೆ ಬೆಂಗಳೂರಿನಂತಹ ಟ್ರಾಫಿಕ್ ದಟ್ಟಣೆಯುಳ್ಳ ನಗರಗಳಲ್ಲಿ ಸವಾರರನ್ನಷ್ಟೇ ಅಲ್ಲದೇ ಪಾದಚಾರಿಗಳಿಗೂ ಜೀವಪಾಯಕ್ಕೆ ಗುರಿ ಮಾಡುತ್ತಿದೆ. ಹೆಚ್ಚಿನ ಟ್ರಿಪಲ್ ಸವಾರರು ಹೆಲ್ಮೆಟ್ ಬಳಸದ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ. ಸಾವಿರಾರು ಜನ ಜೀವ ಕಳೆದು ಕೊಳ್ಳುತ್ತಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ, ಸತತವಾಗಿ 10,0000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 16,2617 ಪ್ರಕರಣಗಳು, ದಾಖಲಾಗಿದ್ದರೆ, ಇನ್ನು 2023ರಲ್ಲಿ 1,17,738 ಪ್ರಕರಣಗಳು ವರದಿಯಾಗಿವೆ. ಈ ವರ್ಷ 149694 ಪ್ರಕರಣಗಳಲ್ಲಿ ಬರೋಬ್ಬರಿ 4,97,6,400 ರೂ.ಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ.
“ಈ ಸಮಸ್ಯೆಯನ್ನು ಪರಿಹರಿಸಲೇಬೇಕಾದ ಕಾರಣ ಕೇವಲ ಅಂಕಿಅಂಶವನ್ನು ಕಡಿಮೆ ಮಾಡುವುದು ಮಾತ್ರವಲ್ಲ; ಜೀವಗಳನ್ನು ರಕ್ಷಿಸುವುದರ ಜೊತೆಗೆ ಸುರಕ್ಷಿತ ರಸ್ತೆಗಳನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.” ಎಂದು ಹಿರಿಯ ಸಂಚಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ರಿಪಲ್ ರೈಡಿಂಗ್ ದುರಂತದ ಪ್ರಕರಣದಲ್ಲಿ, ಮೊಹಮ್ಮದ್ ನಹಿದುರ್ ರೆಹಮಾನ್ ಎಂಬ 19 ವರ್ಷದ ಬಿಬಿಎ ವಿದ್ಯಾರ್ಥಿಯೋರ್ವ ಶನಿವಾರ ರಾತ್ರಿ ಬಿಜಿಎಸ್ ಮೇಲ್ಸೇತುವೆಯ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಮೂವರು ಹದಿಹರೆಯದವರು ಇದ್ದ ಬೈಕ್ ನಲ್ಲಿ ರೆಹಮಾನ್ ಮಧ್ಯೆ ಕುಳಿತಿದ್ದ. ಅತೀ ವೇಗದಿಂದ ಬಂದ ಈ ಬೈಕ್ ಜಾಮಿಯಾ ಮಸೀದಿ ಬಳಿ ರಾತ್ರಿ ಸುಮಾರು 8 ಗಂಟೆ ವೇಳೆ ಆಟೋ ರಿಕ್ಷಾಗೆ ಗುದ್ದಿ ಮೂವರೂ ಕೂಡ ಕೆಳಗೆ ಬಿದ್ದಿದ್ದಾರೆ. ರೆಹಮಾನ್ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ.