29 ಲಕ್ಷ ರೂ ರಿವಾರ್ಡ್ ಹೊಂದಿದ್ದ 25 ನಕ್ಸಲರು ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಮಂಗಳವಾರ ಶರಣಾಗಿದ್ದಾರೆ. ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ 25 ಮಾವೋವಾದಿಗಳು ಶರಣಾಗಿದ್ದು, ಅವರು ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಆರ್ಪಿಎಫ್ನ ಡಿಐಜಿ ಎದುರು ಶರಣಾಗಿದ್ದಾರೆ. ಈ ಮಾವೋವಾದಿಗಳಿಗೆ ಒಟ್ಟು 29 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಈ ಪೈಕಿ ಮೂವರು ಮಾವೋವಾದಿಗಳಿಗೆ ತಲಾ 8 ಲಕ್ಷ ರೂಪಾಯಿ, ಒಬ್ಬ ಮಾವೋವಾದಿಗೆ 3 ಲಕ್ಷ ರೂಪಾಯಿ ಮತ್ತು ಇತರ ಇಬ್ಬರು ಮಾವೋವಾದಿಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶರಣಾದ ಮಾವೋವಾದಿಗಳಿಗೆ ಛತ್ತೀಸ್ಗಢ ಸರ್ಕಾರದ ಪುನರ್ವಸತಿ ನೀತಿಯಡಿ ತಲಾ 25,000 ರೂಪಾಯಿಗಳನ್ನು ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಮಾವೋವಾದಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಆರ್ಪಿಎಫ್ನ ಡಿಐಜಿ ಎದುರು ಶರಣಾಗಿದ್ದಾರೆ.