ಮೇಷ ರಾಶಿ: ಇಂದು ಸ್ವಲ್ಪ ಜಾಗ್ರತೆ ಅಗತ್ಯ. ನಿಮ್ಮ ಶತ್ರು ಅಥವ ವಿರೋಧಿಗಳಿಂದ ತೊಂದರೆ ಆಗುವ ಸಾಧ್ಯತೆ ಇದೆ, ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಇಂದು ನಿಮ್ಮ ಮನೆದೇವರು ಅಥವ ಪುಣ್ಯಕ್ಷೇತ್ರ ದರ್ಶನ ಪಡೆದರೆ ಒಳಿತು. ವ್ಯರ್ಥ ಧನಹಾನಿಯಾಗುವುದು, ಎಚ್ಚರಿಕೆ ಇಂದ ದುಡ್ಡು ಖರ್ಚು ಮಾಡಿ. ಮಾನಸಿಕ ಚಿಂತೆ ಕಾಡಬಹುದು. ಶುಭಸಂಖ್ಯೆ: 9
ವೃಷಭ ರಾಶಿ: ಇಂದು ನಿಮಗೆ ಆಕಸ್ಮಿಕ ಧನಾಗಮನವಾಗಿ ಸಂತಸ ಒಂಟಾಗುತ್ತದೆ. ಟ್ರಾವೆಲ್ನವರಿಗೆ ಅಧಿಕ ಲಾಭವಾಗುತ್ತದೆ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ಇಂದು ನಿಮ್ಮ ಕುಟುಂಬದವರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಹಿರಿಯರಿಂದ ಹಿತನುಡಿ ಕೇಳುವಿರಿ. ಶುಭಸಂಖ್ಯೆ: 7
ಮಿಥುನ ರಾಶಿ: ಇಂದು ನಿಮಗೆ ವಾಹನ ಖರೀದಿ ಯೋಗವಿದೆ. ನಾಲ್ಕು ಚಕ್ರದ ವಾಹನ ಖರೀದಿಸುವಿರಿ. ನಟರಿಗೆ, ಕಲಾವಿದರಿಗೆ ಭೋಗ ವಸ್ತು ಪ್ರಾಪ್ತಿಯಾಗಬಹುದು. ಯುವತಿಯರಿಗೆ ಹಾಗೂ ಸ್ತ್ರೀಯರಿಗೆ ಶುಭ ಕಾರ್ಯಗಳಿಗೆ ಆಹ್ವಾನ ಬರುವುದು ಶುಭ ಸಮಾರಂಭದಲ್ಲಿ ಗೌರವ ಲಭಿಸುವುದು. ಶುಭಸಂಖ್ಯೆ: 5
ಕಟಕ ರಾಶಿ: ನಿಮ್ಮ ಹಾಗೂ ನಿಮ್ಮ ಸ್ನೇಹಿತರ ನಡುವೆ ಅಥವ ಆತ್ಮೀಯರಲ್ಲಿ ಕಲಹ ಉಂಟಾಗಬಹುದು. ಹಿತಶತ್ರುಗಳಿಂದ ಕುತಂತ್ರ ನಡೆಯುವ ಭಯವಿದೆ. ನಿಮ್ಮ ಬಂಧುಗಳೊಂದಿಗೆ ಮಾತಿನ ಚಕಮಕಿ ನಡೆದು ಸಂಬಂಧ ಹಾಲಾಗುವ ಸಾಧ್ಯತೆ ಇದೆ. ನಿಮ್ಮ ಶರೀರದಲ್ಲಿ ಆಯಾಸ ಉಂಟಾಗಿ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 7
ಸಿಂಹ ರಾಶಿ: ಇಂದು ನಿಮ್ಮ ಕಣ್ಣಿಗೆ ಪೆಟ್ಟಾಗಬಹುದು. ದೃಷ್ಟಿ ದೋಷದಿಂದ ತೊಂದರೆಯಾಗಬಹುದು, ಎಚ್ಚರಿಕೆ ಅತ್ಯಗತ್ಯ. ಸರ್ಪ ಭಯ ಇದ್ದರೆ ಕುಕ್ಕೆ ಸುಬ್ರಮಣ್ಯಸ್ವಾಮಿಯ ದರ್ಶನ ಮಾಡಿ. ಹಲವಾರು ಕಾರಣಗಳಿಂದ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕೊಟ್ಟ ಸಾಲ ವಾಪಸ್ ಕೇಳುವಿರಿ, ಹಾಗು ಬಾಕಿ ವಸೂಲಿ ಮಾಡುವಿರಿ. ಕೀಲುಗಳಲ್ಲಿ ನೋವು ಕಾಣಬಹುದು. ಶುಭಸಂಖ್ಯೆ: 7
ಕನ್ಯಾ ರಾಶಿ: ಇಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಏರ್ಪಡಬಹುದು. ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ಇರಲಿ, ಏಕೆಂದರೆ ದಂಡ ಕಟ್ಟುವ ಸಾಧ್ಯತೆ ಇದೆ. ಕೆಲಸದಲ್ಲಿ ಅದರಲ್ಲೂ ಸರ್ಕಾರಿ ಅಧಿಕಾರಿಗಳಿಂದ ತೊಂದರೆ ಉಂಟಾಗಬಹುದು. ವ್ಯಾಪಾರದಲ್ಲಿ ಅತಿಯಾದ ನಷ್ಟ ಇಂದು ಎದುರಿಸಬಹುದು ಜಾಗರೂಕರಾಗಿರಿ. ಶುಭಸಂಖ್ಯೆ: 1
ತುಲಾ ರಾಶಿ: ಇಂದು ನೀವು ನಿಮಗೆ ಬೇಕಾದ ಹಾಗೂ ಇಷ್ಟ ವಸ್ತು ಖರೀದಿ ಮಾಡುವಿರಿ. ಜಮೀನು ಖರೀಸುವವರಿಗೆ ಇಂದು ಶುಭ ದಿನ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಭಿವೃದ್ಧಿ ಕಾಣಬಹುದು, ಹಲವಾರು ಕಾರಣಗಳಿಂದ ವಿದೇಶ ಪ್ರಯಾಣ ಸಾಧ್ಯತೆ ಇದೆ. ಆದರೆ ದುಡುಕ ಬೇಡಿ, ತಾಳ್ಮೆ ಅಗತ್ಯ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ:7
ವೃಶ್ಚಿಕ ರಾಶಿ: ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಸಿಗಬಹುದು. ಸುಖ ದಾಂಪತ್ಯದಲ್ಲಿ ಸಾಮಾನ್ಯ ಸೌಖ್ಯಕ್ಕೆ ಧಕ್ಕೆ ಉಂಟಾಗಿ ಕಲಹ ವಾಗುವ ಸಾಧ್ಯತೆ ಇದೆ. ಮನೆ ದೇವರ ಅಥವ ಕುಲದೇವರ ದರ್ಶನದಿಂದ ಅನುಕೂಲ ಸಿದ್ದಿಪಡಿಸಿಕೊಳ್ಳಬಹುದು. ಶುಭಸಂಖ್ಯೆ:3
ಧನಸ್ಸು ರಾಶಿ: ಇಂದು ನಿಮಗೆ ಸಂತಸದ ದಿನ. ಏಕೆಂದರೆ ಹಳೆಮಿತ್ರರು ಸಿಗುವರು. ಪುಣ್ಯಕ್ಷೇತ್ರದ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದು. ರಾಜಕೀಯ ಅಥವ ಸರ್ಕಾರಿ ಕೆಲಸದಲ್ಲಿರುವ ಪ್ರಭಾವಿಗಳನ್ನ ಭೇಟಿ ಮಾಡುವಿರಿ. ನ್ಯಾಯಾಲಯದ ಕೆಲಸದಲ್ಲಿ ನಿಮಗೆ ಸಂತಸದ ದಿನವಾಗಿದೆ. ಶುಭಸಂಖ್ಯೆ:9
ಮಕರ ರಾಶಿ: ಇಂದು ನೀವು ಶುಭಸುದ್ದಿ ಕೇಳುವಿರಿ. ಕೆಲಸದಲ್ಲಿ ನೀವು ತಲೆಕೆಡಿಸಿಕೊಳ್ಳಬಹುದು. ಹಲವು ದಿನಗಳ ನಂತರ ಮಾನಸಿಕ ನೆಮ್ಮದಿ ಸಿಕ್ಕಿ ಸಂತೋಷದಿಂದ ಇರುವಿರಿ. ಕೆಲಸದಲ್ಲಿ ವ್ಯತ್ಯಾಸ ಉಂಟಾಗಬಹುದು. ಸಕಾಲದಲ್ಲಿ ಕೆಲಸ ಆಗದು. ಕೃಷಿಯಲ್ಲಿ ಲಾಭದ ನಿರೀಕ್ಷೆ. ಶುಭಸಂಖ್ಯೆ:1
ಕುಂಭ ರಾಶಿ: ಇಂದು ಮಹಿಳೆಯರಿಗೆ ಲಾಭದ ದಿನವಾಗಿದೆ. ಸಾರ್ವಜನಿಕವಾಗಿ ಮಾತನಾಡುವ ಮಾತಿನ ಮೇಲೆ ಹಿಡಿತವಿರಲಿ. ಅಪರಿಚಿತರಿಂದ ತೊಂದರೆಯಾಗಬಹುದು ಆದಷ್ಟು ದೂರ ಇರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿ ಫಲ ಸಿಗಲ್ಲ ಇದರಿಂದ ಬೇಸರ ಆಗಬಹುದು. ಶುಭಸಂಖ್ಯೆ:3
ಮೀನ ರಾಶಿ: ಇಂದಿನಿಂದ ನಿಮಗೆ ಸಂಕಷ್ಟ ಹೆಚ್ಚಾಗುವುದು. ಕೋಪ ಒಳ್ಳೆಯದಲ್ಲ ತಾಳ್ಮೆ ಅಗತ್ಯವಾಗಿದೆ. ಮಹಿಳೆಯರಿಗೆ ಇಂದು ಕುಟುಂಬದಲ್ಲಿ ಮಕ್ಕಳ ಮೇಲೆ ಪ್ರೀತಿ ಹೆಚ್ಚಾಗಿ ಸಿಹಿ ಮಾಡಿದರೆ ಕುಟುಂಬದಲ್ಲಿ ನೆಮ್ಮದಿ. ಸ್ತ್ರೀಯರಿಗೆ ನೆಮ್ಮದಿ. ಅನ್ಯರಲ್ಲಿ ಮನಸ್ತಾಪ ಮಾಡಿಕೊಳ್ಳ ಬೇಡಿ. ಶುಭಸಂಖ್ಯೆ: 1