ಮೇಷ ರಾಶಿ: ಇಂದು ನಿಮಗೆ ಸಿಗಬೇಕಾದ ಆಸ್ತಿ ವಿಚಾರದಲ್ಲಿ ಕುಟುಂಬದೊಂದಿಗೆ ತಾಳ್ಮೆ ಇರಲಿ. ಕ್ರಿಕೆಟ್, ಫುಟ್ಬಾಲ್ ಆಟಗಾರರಿಗೆ ಯಶಸ್ಸು ಲಭಿಸುವುದು. ಶುಭ ಶುಕ್ರವಾರವಾದ ಇಂದು ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾದರೆ ಶುಭ ಫಲ ನಿರೀಕ್ಷಿಸಬಹುದು. ಶುಭಸಂಖ್ಯೆ: 9
ವೃಷಭ ರಾಶಿ: ನಿಮ್ಮ ಧರ್ಮಪತ್ನಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಎಚ್ಚರಿಕೆ ಇರಲಿ. ನೀವೇನಾದರೂ ಪ್ರಯಾಣ ಮಾಡುತ್ತಿದ್ದರೆ ಆಕಸ್ಮಿಕವಾಗಿ ಧನಲಾಭ ಆಗಬಹುದು. ಮನೆ ಮಾರಾಟ ವ್ಯವಹಾರದಲ್ಲಿ ಮಾನಸಿಕ ಒತ್ತಡ ಇರುವುದು. ಶುಭಸಂಖ್ಯೆ:1
ಮಿಥುನ ರಾಶಿ: ನಿಮಗೆ ಇಂದು ಹಿತಶತ್ರುಗಳ ಬಾಧೆ ಕಾಡಬಹುದು. ವಿಭಿನ್ನ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನ. ಲೇಖಕರು ಮತ್ತು ಪತ್ರಕರ್ತರಿಗೆ ಸಮಾಜದಲ್ಲಿ ಅತಿಯಾದ ಮನ್ನಣೆ ಸಿಗಲಿದೆ. ಆತ್ಮೀಯರನ್ನ ಇಂದು ನಿಮಗೆ ಸಿಗುತ್ತಾರೆ. ಶುಭಸಂಖ್ಯೆ: 5
ಕಟಕ ರಾಶಿ: ಇಂದು ನಿಮ್ಮ ದಾಂಪತ್ಯದಲ್ಲಿ ಸಾಮರಸ್ಯ ಇರುತ್ತದೆ. ಗಂಡ ಹೆಂಡತಿ ಇಬ್ಬರೂ ದೇವಸ್ಥಾನಕ್ಕೆ ಹೋಗಿನಂದರೆ ಉಳಿತು. ನಿಮ್ಮ ಸ್ವಂತ ಉದ್ಯೋಗದಲ್ಲಿ ಒತ್ತಡ ಬರಬಹುದು ಜಾಗ್ರತೆ ಇರಲಿ. ಸಹೋದರರೊಂದಿಗೆ ಕಲಹ ಬೇಡ. ಶುಭಸಂಖ್ಯೆ: 2
ಸಿಂಹ ರಾಶಿ: ಸಾಂಪ್ರದಾಯಿಕ ವಿದ್ಯೆಗಳಾದ ಶಾಸ್ತ್ರ, ಬಡಗಿ, ಕುಲ ಕಸುಬುಗಳಲ್ಲಿ ನಿರಾಸಕ್ತಿ ಇರಲಿದೆ, ವಿವಿಧ ಕಾರ್ಮಿಕ ವರ್ಗದವರಿಗೆ ಇಷ್ಟು ದಿನ ಇದ್ದ ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಸುಧಾರಣೆ ಕಾಣುತ್ತೀರ. ಸುಖ ಜೀವನ ಶುಭ ಫಲ. ಶುಭಸಂಖ್ಯೆ: 7
ಕನ್ಯಾ ರಾಶಿ: ಇಂದು ನಿಮ್ಮ ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ವಿದ್ಯೆಯಲ್ಲಿ ಆಸಕ್ತಿ ಮೂಡುತ್ತದೆ. ದೂರ ಪ್ರಯಾಣಕ್ಕೆ ಅಧಿಕ ಖರ್ಚು ಆಗಬಹುದು , ಹೀಗಾಗಿ ವ್ಯವಸ್ತೆ ಅಗತ್ಯ. ಮೇಕಪ್, ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ಭಾರೀ ನಷ್ಟವಾಗುತ್ತದೆ. ಶುಭಸಂಖ್ಯೆ: 6
ತುಲಾ ರಾಶಿ: ಹೂಡಿಕೆ ಹಾಗೂ ಶೇರ್ ಮಾರ್ಕೆಟ್ ವ್ಯವಹಾರದಲ್ಲಿ ನಿಮ್ಮ ಕೈ ಸುಡಲಿದೆ, ಆದಷ್ಟು ಜಾಗರೂಕರಾಗಿರಿ. ಹಲವು ಅಲಂಕಾರಿಕ ಹಾಗೂ ವೈಭವೋಪೇತ ವಸ್ತುಗಳನ್ನ ಖರೀದಿ ಮಾಡುವಿರಿ. ಕಾನೂನು ಹೋರಾಟದಲ್ಲಿ ಜಯ ಸಿಗಲಿದೆ. ಶುಭಸಂಖ್ಯೆ: 2
ವೃಶ್ಚಿಕ ರಾಶಿ: ಮದುವೆಯಾಗಿದ್ದರೆ ತವರು ಮನೆಯವರಿಂದ ಅಧಿಕ ಸಹಾಯ ಸಿಗಲಿದೆ. ಬದಲಾಯಿಸಿದ ಕೆಲಸದಿಂದ ನಿಮಗೆ ನೆಮ್ಮದಿ ಸಿಗಲಿದೆ. ಕೌಟುಂಬಿಕ ಕಲಹ ತಾರಕಕ್ಕೆ ಏರಬಹುದು ಎಚ್ಚರದಿಂದ ಮಾತನಾಡಿ. ವ್ಯಾಪಾರದಲ್ಲಿ ಏರುಪೇರು. ಶುಭಸಂಖ್ಯೆ: 6
ಧನುಸ್ಸು ರಾಶಿ: ಇಂದು ನಿಮ್ಮ ಜೀವನದ ಮಹತ್ವದ ದಿನ. ಉದ್ಯೋಗದಲ್ಲಿ ವರ್ಗಾವಣೆ ಆಗಬಹುದು, ಸಹೋದ್ಯೋಗಿ ಗಳಿಂದ ಕಿರಿಕಿರಿ ಇರುತ್ತದೆ. ಇಂದು ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳಿಗೆ ಚಿಂತನೆ ಮಾಡುತ್ತೀರಿ. ಶುಭಸಂಖ್ಯೆ: 3
ಮಕರ ರಾಶಿ: ಸಿನಿ ರಂಗದಲ್ಲಿ ಇರುವವರು ಇಂದು ನಿರೀಕ್ಷೆಗಿಂತ ಅಧಿಕ ಲಾಭ ಪಡೆಯುತ್ತೀರಿ. ಮನೆ ಕಟ್ಟುವ ಕೆಲಸದಲ್ಲಿ ಇರುವವರಿಗೆ ಸಂಬಂಧಿಗಳಿಂದ ಧನಸಹಾಯ ಒದಗಿ ಬರಲಿದೆ. ಯಂತ್ರೋಪಕರಣ ಗಳಿಂದ ತೊಂದರೆಯಾಗಬಹುದು ಆದರೆ ಜಾಗ್ರತೆ ಇದ್ದರೆ ಒಳಿತು. ಶುಭಸಂಖ್ಯೆ: 4
ಕುಂಭ ರಾಶಿ: ನಿಮಗೆ ನಿಮ್ಮ ಮಗನ ಭವಿಷ್ಯದ ಚಿಂತೆ ಕಾಡಲಿದೆ. ರೈತರಿಗೆ ಇಂದು ಶುಭದಾಯಕ ದಿನವಾಗಿದೆ. ವ್ಯವಸಾಯದಲ್ಲಿ ಇಂದು ಸುಲಭ ಕಾರ್ಯ ಸಿದ್ದಿ. ಹೈನುಗಾರಿಕೆ ಮಾಡುವವರಿಗೆ ಉತ್ತಮ ಆದಾಯ. ಔಷಧ ವ್ಯಾಪಾರಸ್ಥರಿಗೆ ನಷ್ಟ ಆಗಬಹುದು ಜಾಗ್ರತೆ. ಶುಭಸಂಖ್ಯೆ: 8
ಮೀನ ರಾಶಿ: ಪ್ರೀತಿಯಲ್ಲಿ ನಿಮಗೆ ಜಯ ಸಿಗಲಿದೆ. ಡಿವೋರ್ಸ್ ಆಗಿರುವ ಮಹಿಳೆಯರಿಗೆ ವಿವಾಹ ಯೋಗ ಕೂಡಿ ಬರಲಿದೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗಬಹುದು. ಹೋರಾಟ ಮಾಡುವವರಿಗೆ ರಾಜಕಾರಣಿಗಳ ಸಹಕಾರ ಸಿಗುತ್ತದೆ. ಶುಭಸಂಖ್ಯೆ: 7