ಬೆಸ್ಕಾಂ ತುರ್ತು ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಕೋರಮಂಗಲ ವಿಭಾಗ ವ್ಯಾಪ್ತಿಯಲ್ಲಿ, ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನಿಂದ ಮಾಹಿತಿ ನೀಡಲಾಗಿದ್ದು, ನವೆಂಬರ್ 16 ರಿಂದ 18 ವರೆಗೂ ಮೂರು ದಿನಗಳು ವಿದ್ಯುತ್ ಕಡಿತವಾಗಲಿದೆ.
ಇನ್ನು ಈ ಬಗ್ಗೆ ಬೆಸ್ಕಾಂನಿಂದ ಮಾಹಿತಿ ನೀಡಲಾಗಿದ್ದು, ” ಕೆಪಿಟಿಸಿಎಲ್ ವತಿಯಿಂದ ಗ್ಲೋಬಲ್ ಟೆಕ್ ಪಾರ್ಕ್, ನಿಮಾನ್ಸ್ ಮತ್ತು ಜಯದೇವ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೋರಮಂಗಲ ವಿಭಾಗ ವ್ಯಾಪ್ತಿಯಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ನವೆಂಬರ್ 16 (ಶನಿವಾರದ) ನವೆಂಬರ್ 17 (ಭಾನುವಾರ) ಹಾಗೂ ನವೆಂಬರ್ 18 (ಸೋಮವಾರ) ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ” ಎಂದು ತಿಳಿಸಲಾಗಿದೆ.
ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಎಕೋವರ್ಲ್ಡ್ ಕ್ಯಾಂಪಸ್, ಮ್ಯಾರಿಯಟ್ ಹೋಟೆಲ್, ದೇವರಬೀಸನಹಳ್ಳಿ, ವಜ್ರಮ್ ಅಪಾರ್ಟ್ ಮೆಂಟ್ ದೇವರಬೀಸನಹಳ್ಳಿ ಗ್ರಾಮ, ದೊಡ್ಡಕನ್ನೆಳ್ಳಿ ರೋಡ್, ಗೇರ್ ಸ್ಕೂಲ್ ರೋಡ್, ಆದರ್ಶ್, ಸಾಯಿ ಶೃತಿ , ಸ್ಟರ್ಲಿಂಗ್ ಅಸೆಂಟಿಯಾ, ಸಾಮ್ವಿ, ಜೆ.ವಿ, ಹೋಟೆಲ್, ಕಲ್ಯಾಣಿ ಟೆಕ್ ಪಾರ್ಕ್, ಎಕ್ಸೋರ ಟೆಕ್ ಪಾರ್ಕ್, ಒರೆಕಲ್ ಟೆಕ್ ಪಾರ್ಕ್, ಸೆಸ್ನಾ ಟೆಕ್ ಪಾರ್ಕ್, ಕಾಡುಬೀಸನಹಳ್ಳಿ, ಐಬಿಎಮ್, ಅಸ್ಸೆಂಚರ್, ಐಬಿಎಮ್ ‘ಡಿ’ ಬ್ಲಾಕ್, ಐಬಿಎಮ್, ಗುರಪ್ಪನ ಪಾಳ್ಯ, ಸೋಬಾ ಮಜಾರಿಯಾ ಅಪಾರ್ಟ್ ಮೆಂಟ್, ಬಿ.ಜಿ.ರಸ್ತೆ, ಬಿಟಿಎಂ 1ನೇ ಹಂತ, ವಕೀಲ್ ಸ್ಕೋಯರ್ ಬಿಲ್ಡಿಂಗ್, ಮಡಿವಾಳ ಮಾರುತಿ ನಗರ, ಬಿಸ್ಮಿಲ್ಲಾ ನಗರ, ಸೋಬಾ ಡೆವಲ್ಪರ್ಸ್ , ಜೈಭೀಮ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಜಯನಗರ, ತಿಲಕನಗರಗಳಲ್ಲಿ ವಿದ್ಯುತ್ ವ್ಯತ್ಯಯ
ಜಯದೇವ ಪವರ್ ಸ್ಟೇಷನ್ ವಿದ್ಯುತ್ ನಿರ್ವಹಣಾ ಕಾಮಗಾರಿ ಸಲುವಾಗಿ ನವೆಂಬರ್ 16 ರ ಶನಿವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಜಯನಗರ ಹಾಗೂ ತಿಲಕ್ ನಗರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್.ಎಸ್ ಪಾಳ್ಯ ಇಂಡಸ್ಟಿರಿಯಲ್ ಏರಿಯಾ, ಜಾಹ್ನವಿ ಎನ್ಕ್ಲೇವ್, ಅನಂತ ಲೇಔಟ್, ಬಿಳೆಕಳ್ಳಿ ಮೇನ್ ರೋಡ್, ಜಯನಗರ 4, 9ನೇ ಟಿ ಬ್ಲಾಕ್, ಜಯನಗರ ಈಸ್ಟ ಯಂಡ್, ಎಬಿಸಿಡಿ ರಸ್ತೆ, ಬಿಹೆಚ್ಇಎಲ್ ಲೇಔಟ್, ಎಸ್ ಆರ್ ಕೆ ಗಾರ್ಡನ್, ಎನ್ಎಲ್ ಲೇಔಟ್ ತಿಲಕ್ ನಗರ, ಶಾಂತಿ ಪಾಕ , ಜಯದೇವ ಆಸ್ಪತ್ರೆ ಸುತ್ತಮುತ್ತಲ ಪ್ರದೇಶಗಳು, ಎನ್ ಎಸ್, ಪಾಳ್ಯ ಮೇನ್ ರೋಡ್, ಜಿ ಆರ್ ಬಿ ಮೇನ್ ರೋಡ್, ಬಿಸ್ಮಿಲ್ಲಾ ನಗರ, ಶೋಭ ಅಪಾಟ್ಮೆಮೆಂಟ್, ದಿವ್ಯಶ್ರೀ ಟನರಸ್, ವೆಗಾಸಿಟಿ ಮಾಲ್, ಎರ್ಟೆಲ್ ಅಫೀಸ್, ಬನ್ನೇರುಗಟ್ಟ ಮೇನ್ ರಸ್ತೆ, ಕೆ.ಇ.ಬಿ ಕಾಲೋನಿ, ಗುರಪ್ಪನ ಪಾಳ್ಯ, ಬಿಟಿಎಮ್ ಮೊದಲನೇ ಹಂತ ಹಾಗು ಕಿಡ್ವಾಯ್, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಇಂಧಿರಾ ಗಾಂಧಿ ಆಸ್ಪತ್ರೆ, ಜಯನಗರ 1, 2, 3, 4, 9ನೇ ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್, ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.