ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ಇತ್ತೀಚೆಗಷ್ಟೇ ತಮ್ಮ ಆರನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. 2018ರ ಡಿಸೆಂಬರ್ನಲ್ಲಿ ಈ ಜೋಡಿ ಅದ್ಧೂರಿಯಾಗಿ ವಿವಾಹವಾಗಿದ್ದರು ಇದೀಗ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಮತ್ತು ಇತ್ತೀಚೆಗಷ್ಟೇ ಸೆರೋಗಸಿ ಮೂಲಕ ಮಗಳಾದ ಮಾಲತಿ ಜೋನಸ್ನನ್ನು ಬಾಳಿಗೆ ಬರಮಾಡಿಕೊಂಡಿದ್ದಾರೆ.
ಇದೀಗ ಈ ಜೋಡಿ ತಮ್ಮ ಮಗಳಾದ ಮಾಲತಿಯೊಂದಿಗೆ ವಿಶಿಷ್ಟವಾದ ಪ್ರವಾಸ ನಡೆಸಿದರು. ಪ್ರವಾಸದ ಸಮಯದಲ್ಲಿ ಅವರು ಮಗಳನ್ನು ಹಲವೆಡೆಗೆ ಕರೆದುಕೊಂಡು ಹೋಗಿ, “ಮೋನಾ 2” ಸಿನಿಮಾ ತೋರಿಸಿದರು ಹಾಗೂ ಮಗಳೊಂದಿಗೆ ಕ್ರಿಸ್ಮಸ್ ಟ್ರೀ ಗೆ ಸಿಂಗಾರ ಮಾಡುವುದರ ಜೊತೆಗೆ ಮಾಲತಿಯೊಂದಿಗೆ ಮೆಮೊರಿಬಲ್ ಕ್ಷಣಗಳನ್ನು ಕಳೆದರು. ಪ್ರಿಯಾಂಕಾ, 2016-17ರ ವೇಳೆಯಲ್ಲಿ ಬಾಲಿವುಡ್ನಿಂದ ಹಾಲಿವುಡ್ಗೆ ಶಿಫ್ಟ್ ಆದ ನಂತರ, 2017ರಲ್ಲಿ ನಿಕ್ ಜೋನಸ್ ಅವರನ್ನು ಪಾರ್ಟಿಯೊಂದರಲ್ಲಿ ಭೇಟಿಯಾದರು, ಅಲ್ಲಿಂದ ಪ್ರೀತಿ ಶುರುವಾಯಿತು 2018ರಲ್ಲಿ ಅವರು ವಿವಾಹವಾಗಿ ಪ್ರಿಯಾಂಕಾ ಸಂಪೂರ್ಣವಾಗಿ ಹಾಲಿವುಡ್ನಲ್ಲಿ ನೆಲೆಸಿದ್ದು, ಬೆವರ್ಲಿ ಹಿಲ್ಸ್ ಮತ್ತು ಲಂಡನ್ನಲ್ಲಿ ಮನೆಗಳನ್ನು ಹೊಂದಿದ್ದಾರೆ.