ಚಿತ್ರದುರ್ಗದ ಕವಾಡಿಗರಹಟ್ಟಿ ಆಶ್ರಯ ಬಡಾವಣೆಯಲ್ಲಿ ನಡೆದ ಘಟನೆ ಜಗತ್ತನ್ನೇ ನಡುಗಿಸಿದೆ. ಗಂಡನ ಮೇಲಿನ ದ್ವೇಷವನ್ನು ಮಗುವಿನ ಮೇಲೆ ಚೆಲ್ಲಿದ ತಾಯಿಯ ಕ್ರೌರ್ಯಕ್ಕೆ 7 ವರ್ಷದ ಬಾಲಕ ನರಳುತ್ತಿದ್ದಾನೆ. ಕೈ-ಕಾಲುಗಳಿಗೆ ಬರೆ ಎಳೆದು ವಿಕೃತ ಚಿತ್ರಹಿಂಸೆಗೆ ಗುರಿ ಮಾಡಿದ್ದರ ಪರಿಣಾಮವಾಗಿ ಮಗು ಈಗ ಅಜ್ಜಿ ಶಮಶಾದ್ ರೊಂದಿಗೆ ಸುರಕ್ಷಿತವಾಗಿದೆ.
ಕಳೆದ 10 ವರ್ಷಗಳ ಹಿಂದೆ ಪ್ರೀತಿಯಿಂದ ಮದುವೆಯಾಗಿದ್ದ ಅನಿಲ್ ಮತ್ತು ಉಮ್ಮೇಸಲ್ಮಾ ದಂಪತಿ, 2 ವರ್ಷಗಳ ಹಿಂದೆ ತಲಾಖ್ ಪಡೆದು ಬೇರೆಯಾಗಿದ್ದರು. ನಂತರ ಇಬ್ಬರೂ ಬೇರೆ ಮದುವೆಯಾಗಿದ್ದಾರೆ. ಇದರ ನಡುವೆ, ಇಬ್ಬರಿಗೂ ಹುಟ್ಟಿದ 7 ವರ್ಷದ ಮಗುವಿನ ಕಾಳಜಿಯನ್ನು ಕುರಿತು ವಿವಾದ ಮೂಡಿತು. ತಾಯಿ ಉಮ್ಮೇಸಲ್ಮಾ ಮಗುವನ್ನು ತನ್ನ ಬಳಿ ಇರಿಸಿಕೊಂಡು, ಅವನ ತಂದೆ ಅನಿಲ್ ಮತ್ತು ಅಜ್ಜಿ ಶಮಶಾದ್ ರನ್ನು ಭೇಟಿಯಾಗದಂತೆ ನಿರ್ಬಂದಿಸಿದ್ದಳು .ಮನೆಯಲ್ಲಿ ಬಂಧನದಲ್ಲಿಡುವುದು, ಊಟ ಕೊಡದಿರುವುದು, ಕೈ-ಕಾಲುಗಳಿಗೆ ಬರೆ ಎಳೆದು ಹಿಂಸಿಸುವುದು ಸೇರಿದಂತೆ ಮಗುವಿಗೆ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ನಡೆದಿದ್ದು ತಿಳಿದುಬಂದಿದೆ.
ಮೊಮ್ಮಗನ ಸ್ಥಿತಿ ಗಮನಿಸಿದ ಅಜ್ಜಿ ಶಮಶಾದ್, ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯವನ್ನು ಬೇಡಿದರು. “ಮಗು ಬೇಕು, ತಮಗೆ ಬೇಕಾದರೆ ನನಗೆ ಕೊಡಿ” ಎಂದು ಪೊಲೀಸ್ ಠಾಣೆಯ ಮುಂದೆ ಸೊಸೆ ಉಮ್ಮೇಸಲ್ಮಾ ಗೆ ಅಂಗಲಾಚಿದರು. ಘಟನೆಯ ತನಿಖೆ ನಡೆಸಿದ ಪೊಲೀಸರು ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದರು. ಮನೋವೈದ್ಯರ ಕೌನ್ಸೆಲಿಂಗ್ ನಂತರ, ಮಗುವನ್ನು ಅಜ್ಜಿಯ ಹತ್ತಿರಕ್ಕೆ ಕಳುಹಿಸಲಾಯಿತು.
ಈ ಹೋರಾಟದಲ್ಲಿ ಅಜ್ಜಿ ಶಮಶಾದ್ ರಿಗೆ ಕರವೆ ಸಂಸ್ಥೆಯ ಕಾರ್ಯಕರ್ತರ ಬೆಂಬಲ ಸಿಕ್ಕಿದೆ. ಮಗುವಿನ ತಂದೆ ಅನಿಲ್ ಮಾತನಾಡುತ್ತಾ, “ನಾವು ನ್ಯಾಯಾಲಯದ ಮೂಲಕ ಮಗುವಿನ ಕಸ್ಟಡಿ ಗೆದ್ದಿದ್ದೇವೆ. ಅವನು ನಮ್ಮೊಂದಿಗೆ ಸುರಕ್ಷಿತ” ಎಂದು ಹೇಳಿದ್ದಾರೆ. ಹೀಗಾಗಿ, ಈಗ ಮಗು ಅಜ್ಜಿಯ ಸಂರಕ್ಷಣೆಯಲ್ಲಿ ಇದ್ದು, ನ್ಯಾಯಿಕ ಪ್ರಕ್ರಿಯೆ ನಡೆಯುತ್ತಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc