ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನ, 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿದ ಬಳಿಕ ರಾಜ್ಯದಲ್ಲಿ ಬಂಡವಾಳ ವೆಚ್ಚ ಕುಸಿತವಾಗಿ ರಾಜ್ಯಸ್ಥ ಕೊರತೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ರಾಜ್ಯದ ಹಣಕಾಸಿನ ಮಧ್ಯವಾರ್ಷಿಕ ವರದಿಯಲ್ಲಿ ರಾಜ್ಯದಲ್ಲಿ ರಾಜತ್ವ ಕೊರತೆ 27,354 ಕೋಟಿ ರೂ.ಗೆ ತಲುಪಿದೆ, ಈ ಕೊರತೆ ಸರಿದೂಗಿಸಲು ತೆರಿಗೆ ದರ ಪರಿಷ್ಕರಣೆ ಸಾರ್ವಜನಿಕ ಬಳಕೆದಾರರ ಶುಲ್ಕ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ಯಾರಂಟಿಗಳ ಅನುಷ್ಟಾನದ ನಂತರ ಬಂಡವಾಳ ವೆಚ್ಚ ಕುಸಿದು ರಾಜಸ್ಥ ಕೊರತೆ ಹೆಚ್ಚಳವಾಗಿದೆ. ಹಣಕಾಸು ವರ್ಷಾಂತ್ಯಕ್ಕೆ ರಾಜ್ಯದ ಸಾಲ 6.65 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಲಿದೆ ಎನ್ನಲಾಗಿದ್ದು, ಬದ್ಧತಾ ವೆಚ್ಚಗಳಾದ ವೇತನ, ಪಿಂಚಣಿ, ಬಡ್ಡಿ ಪಾವತಿ, ಸಹಾಯಧನ ಹೆಚ್ಚಳದಿಂದ ರಾಜಸ್ವ ಕೊರತೆ ಉಂಟಾಗಿದೆ. ಇದನ್ನು ಸರಿಗಟ್ಟಲು ತೆರಿಗೆ ದರಗಳನ್ನು ಪರಿಷ್ಕರಣೆ ಮಾಡುವ ಜೊತೆಗೆ ಸಾರ್ವಜನಿಕ ಸೇವೆಗಳಿಗೆ ವಿಧಿಸುವ ಬಳಕೆದಾರರ ಶುಲ್ಕ ಪರಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.