ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭ ಜುಲೈ 12 ರಂದು ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಅಂಬಾನಿ ಫ್ಯಾಮಿಲಿಯಲ್ಲಿ ಸಡಗರ ಮುಗಿಲು ಮುಟ್ಟಿದೆ. ಮನೆ ತುಂಬ ಬಂಧು-ಬಳಗ, ಸ್ನೇಹಿತರು ಸೇರಿದಂತೆ ನೂರಾರು ಜನ ಲವಲವಿಕೆಯಲ್ಲಿ ತೊಡಗಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ನಾಳೆ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಬಾಲಿವುಡ್ ನಟ, ನಟಿಯರು, ಉದ್ಯಮಿಗಳು, ಕ್ರಿಕೆಟರ್ಸ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇಂತಹ ಅದ್ಧೂರಿ ಸಮಾರಂಭದಲ್ಲಿ ಪಾಪ್ ಐಕಾನ್ ಜಸ್ಟಿನ್ ಬೈಬರ್ ಸಂಗೀತಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕಿರಿಯ ಪುತ್ರನ ಮದುವೆಗೆ ಕೋಟಿ ಕೋಟಿ ರೂಪಾಯಿಗಳನ್ನ ಸುರಿಯುತ್ತಿರೋ ಮುಖೇಶ್ ಅಂಬಾನಿ, ಪಾಪ್ ಐಕಾನ್ ಎಂದೇ ಖ್ಯಾತರಾಗಿರುವ ಕೆನಾಡದ ಸಿಂಗರ್ ಜಸ್ಟಿನ್ ಬೈಬರ್ಗೆ ಕೋಟಿಗಟ್ಟಲೆ ದುಡ್ಡು ಕೊಟ್ಟು ಕರೆಸಿದ್ದಾರೆ. ಈಗಾಗಲೇ ಜಸ್ಟಿನ್ ಬೈಬರ್ ಮುಂಬೈಗೆ ಆಗಮಿಸಿದ್ದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಸಂಗೀತಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕೇವಲ ಒಂದು ಸಂಗೀತ ಕಾರ್ಯಕ್ರಮ ನೀಡಲು ಜಸ್ಟಿನ್ ಬೈಬರ್ ಅವರು ಬರೋಬ್ಬರಿ 83 ಕೋಟಿ ರೂಪಾಯಿಗಳನ್ನು ಚಾರ್ಜ್ ಮಾಡಿದ್ದಾರಂತೆ . ಇಂಟರ್ನ್ಯಾಷನಲ್ ಪಾಪ್ ಸೆನ್ಸೇಷನ್ ರಿಹಾನ್ನಾ, ಬೆಯೋನ್ಸ್ ಮತ್ತು ಎಕಾನ್ಗಿಂತ ಬೈಬರ್ ಅಧಿಕ ಹಣ ಪಡೆದಿದ್ದಾರೆ .