ಅಡುಗೆ ಅನಿಲ ಸಿಲಿಂಡರ್ಗಳ ಕಳವು ತಡೆಯಲು, ಅವುಗಳ ದಾಸ್ತಾನು ನಿರ್ವಹಣೆಗೆ ಅನುಕೂಲವಾಗುವಂತೆ ಕ್ಯುಆರ್ ಕೋಡ್ಗಳನ್ನು ಅಭಿವೃದ್ದಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶೀಘ್ರವೇ ಕ್ಯುಆರ್ ಕೋಡ್ ಹೊಂದಿರುವ ಎಲ್ಪಿಜಿ ಸಿಲಿಂಡರ್ಗಳು ಲಭ್ಯವಾಗಿದೆ. ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಪೆಟ್ರೋಲಿಯಂ ಹಾಗೂ ಸ್ಪೋಟಕ ಸುರಕ್ಷತ ಸಂಸ್ಥೆಯ ಎಲ್ಲಾ ಪಾಲಿದಾರರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಲಾಗಿದೆ. ಸಿಲಿಂಡರ್ ಟ್ರ್ಯಾಕಿಂಗ್, ಟ್ರೇಸಿಂಗ್ ಹಾಗೂ ನಿರ್ವಹಣೆಗೆ ಈ ಕ್ರಮ ಸಹಾಯಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಜನವಸತಿ ಬಳಿ ಪೆಟ್ರೋಲ್ ಪಂಪ್ ನಿಯಮ ರೂಪಿಸಲು ಸೂಚನೆ ನೀಡಲಾಗಿದೆ. ಜನವಸತಿಯ 35ರಿಂದ 50 ಮೀಟರ್ಗಳ ಅಂತರದಲ್ಲಿ ಪೆಟ್ರೋಲ್ ಪಂಪ್ಗಳನ್ನು ತೆರೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುರಕ್ಷತ ಕ್ರಮಗಳ ಮಾದರಿಯನ್ನು ರೂಪಿಸವಂತೆ ಪಿಯೂಷ್ ಗೋಯಲ್, ಪೆಟ್ರೋಲ್ ಮತ್ತು ಸ್ಪೋಟಕ ಸುರಕ್ಷತ ಸಂಸ್ಥೆಗೆ ಸೂಚಿಸಿದ್ದಾರೆ.