ಉತ್ತರ ಕರ್ನಾಟಕದ ಜನರ ಜೀವನಾಡಿಯಾಗಿರುವ ಮಹಾದಾಯಿ ನದಿ ಯೋಜನೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಪ್ರವಾಹ ತಂಡ ಯೋಜನಾ ಸ್ಥಳಕ್ಕೆ ಭೇಟಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಯೋಜನೆ ಆರಂಭವಾಗುವ ಕುರಿತು ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೇ ಅಪ್ಡೇಟ್ ನೀಡಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಳಸಾ- ಬಂಡೂರಿ ತಿರುವು ಯೋಜನೆಗೆ ಯಾವುದೇ ಅಡ್ಡಿಪಡಿಸುವ ಕೆಲಸ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಗೋವಾ ಸರ್ಕಾರದ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರ ಪ್ರವಾಹ ತಂಡ ರಚನೆ ಆಗಿಲ್ಲ. ಇದೊಂದು ಎಲ್ಲ ಜಲವಿವಾದಕ್ಕೆ ಸಂಬಂಧಿಸಿದ ಪ್ರವಾಹ ತಂಡ ಅಷ್ಟೇ ಎಂದರು. ಯಾವುದೇ ಜಲವಿವಾದ ಇದ್ದರು ಪರಿಶೀಲನೆ ಮಾಡುತ್ತದೆ. ಇದೊಂದು “ಪ್ರೋಗ್ರೆಸಿವ್ ರಿವರ್ ಅಥಾರಿಟಿ ಫಾರ್ ವಾಟರ್ ಅಂಡ್ ಹಾರ್ಮನಿ” ತಂಡ ಎಂದು ಅವರು ಹೇಳಿದರು.
ಇದೇ ವಿಚಾರವಾಗಿ ನಾಳೆ ಜುಲೈ 7 ರಂದು ಮಹದಾಯಿ ಜಲಾನಯನಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಲಾಗುತ್ತದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ ಮುಂದಾಳತ್ವ ವಹಿಸಿಲ್ಲ. ಕಳಸಾ- ಬಂಡೂರಿ ಯೋಜನೆಗೆ ಒಳಪಟ್ಟ 12 ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಸಂಜೆ 6ಕ್ಕೆ ಬೆಳಗಾವಿಯಲ್ಲಿ ವಾಸ್ತವ್ಯ ಮಾಡುವರು’. ಮುಖ್ಯವಾಗಿ ಇದರಲ್ಲಿ ಯಾವುದೇ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ತಿಳಿಸಿದರು.
ಮಹದಾಯಿ ನದಿ ನೀರಿನ ಹಂಚಿಕೆ ಮಾಡಿ ನ್ಯಾಯಮೂರ್ತಿ ಪಂಚಾಲ ನ್ಯಾಯ ಮಂಡಳಿಯು 2018ರ ಆಗಸ್ಟ್ 14ರಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ 2020ರ ಫೆಬ್ರುವರಿ 20ರಂದು ತೀರ್ಪು ನೀಡಿತ್ತು. ಇದರ ಅನ್ವಯ ಹಂಚಿಕೆಯ ನೀರನ್ನು ಬಳಸಲು ಪರವಾನಗೆ ಸಿಕ್ಕಿದೆ. ಕಳಸಾ ಪ್ರದೇಶದಲ್ಲಿ ಅರಣ್ಯ ಪ್ರದೇಶ ಕುರಿತು ಸಹ ಪರಿಶೀಲನೆ ಆಗಲಿದೆ ಎಂದರು.