ರಾಜ್ಯದಲ್ಲಿ ಡೆಂಘಿ ಅಬ್ಬರ ಬೆನ್ನಲ್ಲೇ ಝಿಕಾ ವೈರಸ್ ಆತಂಕ ಹೆಚ್ಚಾಗುತ್ತಿದ್ದು ಶಿವಮೊಗ್ಗದಲ್ಲಿ 74 ವರ್ಷದ ವೃದ್ಧರೊಬ್ಬರು ಝಿಕಾ ವೈರಸ್ ಗೆ ಬಲಿಯಾಗಿದ್ದಾರೆ. ಝಿಕಾ ವೈರಸ್ ಸೇರಿದಂತೆ ಬಹು ಅಂಗಾಂಗ ವೈಪಲ್ಯಗಳಿಂದ ಬಳಲುತ್ತಿದ್ದ ವೃದ್ಧ ಕಳೆದ ಹತ್ತು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಕೇವಲ ಝಿಕಾ ವೈರಸ್ಗೆ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು ಎಂದು ಶಿವಮೊಗ್ಗ ಡಿ.ಹೆಚ್.ಒ ಸ್ಪಷ್ಟನೆ ನೀಡಿದ್ದಾರೆ. ಇನ್ನು ಸಾಗರ ಮೂಲದ 24 ವರ್ಷದ ಯುವಕನಲ್ಲೂ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ.