ಬ್ರಿಟನ್ನ ನೂತನ ಪ್ರಧಾನಿಯಾಗುವ ಹಾದಿಯಲ್ಲಿರುವ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇಶದ ಜನರು ಬದಲಾವಣೆಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಎಕ್ಸಿಟ್ ಪೋಲ್ ನಲ್ಲಿ ಅವರ ನೇತೃತ್ವದ ಲೇಬರ್ ಪಾರ್ಟಿ ಬಹುಮತದತ್ತ ದಾಪುಗಾಲಿರಿಸಿದೆ. 61 ರ ಹರೆಯದ ಸ್ಟಾರ್ಮರ್, ಹೊಲ್ಬೋರ್ನ್ ಮತ್ತು ಸೇಂಟ್ ಪ್ಯಾನ್ಕ್ರಾಸ್ನಿಂದ ಗೆದ್ದ ನಂತರ ತಮ್ಮ ಗೆಲುವಿನ ಭಾಷಣದಲ್ಲಿ ಜನರು ನನಗೆ ಮತ ನೀಡಿದ್ದರೂ ನೀಡದಿದ್ದರೂ ಈ ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಗೆ ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ.
14 ವರ್ಷಗಳ ಕನ್ಸರ್ವೇಟಿವ್ ಆಡಳಿತವನ್ನು ಕೊನೆಗೊಳಿಸಲು ಮತ್ತು ಲೇಬರ್ ಪಕ್ಷಕ್ಕೆ ಪ್ರಚಂಡ ವಿಜಯವನ್ನು ನೀಡಲು ಬ್ರಿಟನ್ನರು ಈ ಬಾರಿ ತೀರ್ಮಾನಿಸಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಎಕ್ಸಿಟ್ ಪೋಲ್ ಪ್ರಕಾರ, ಲೇಬರ್ ಪಕ್ಷ 410 ಸ್ಥಾನಗಳನ್ನು ಗೆಲ್ಲಬಹುದು. ಸರ್ಕಾರ ರಚನೆಗೆ ಸರಳ ಬಹುಮತಕ್ಕೆ ಬೇಕಾದ 326 ಗಡಿ ದಾಟಿ ಪ್ರಧಾನ ಮಂತ್ರಿ ರಿಷಿ ಸುನಕ್ ನೇತೃತ್ವದ ಟೋರಿಗಳು ಕೇವಲ 131 ಸ್ಥಾನಗಳಿಗೆ ಇಳಿಯಬಹುದು ಎನ್ನಲಾಗಿದೆ.