- ಸಂತ್ರಸ್ತೆ ಮಹಿಳೆಯ ಅಪಹರಣ ಪ್ರಕರಣ
- ಭವಾನಿ ರೇವಣ್ಣಗೆ ಅವರಿಗೆ ಮತ್ತೊಂದು ನೋಟಿಸ್ ಜಾರಿ
ಸಂತ್ರಸ್ತೆ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 1 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಎಸ್ಐಟಿ ಭವಾನಿ ರೇವಣ್ಣಗೆ ಅವರಿಗೆ ಮತ್ತೊಂದು ನೋಟಿಸ್ ಜಾರಿ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ನೀಡಿದ್ದ ನೋಟಿಸ್ಗೆ ಪ್ರತಿಕ್ರಿಯಿಸಿದ್ದ ನೀವು, ತನಿಖೆಗೆ ಅವಶ್ಯವಿದ್ದರೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇರುವುದಾಗಿ ತಿಳಿಸಿದ್ದೀರಿ. ಆದರೆ ಈ ಹಿಂದೆ ನೀಡಿದ್ದ ನೋಟಿಸ್ಗೆ ನೀವು ಉತ್ತರಿಸಿಲ್ಲ. ಈ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡುವ ಅವಶ್ಯಕತೆ ಇದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1 ಋಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ಒಳಗೆ ವಿಚಾರಣೆಗೆ ಬರುತ್ತೇವೆ. ಆ ಸಂದರ್ಭದಲ್ಲಿ ಮನೆಯಲ್ಲಿಯೇ ಖುದ್ದು ಹಾಜರಿರಬೇಕು ಎಂದು ಎಸ್ಐಟಿ ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ನೀಡಿರುವ ನೋಟಿಸ್ನಲ್ಲಿ ಸೂಚಿಸಿದ್ದಾರೆ.