ಮದುವೆಗಳು ಜೀವನದ ಪ್ರಮುಖ ಕ್ಷಣವಾಗಿದ್ದರೂ, ಎಲ್ಲ ಸಂಬಂಧಗಳು ಸದಾ ಯಶಸ್ವಿಯಾಗಿ ಮುಂದುವರಿಯುವ ನಿರೀಕ್ಷೆ ಇಲ್ಲ. ಇದರ ಬಗ್ಗೆ ಗಮನ ಸೆಳೆಯುವಂತಹ ಒಂದು ವಿಚಿತ್ರ ಘಟನೆ ಹರಿಯಾಣದಲ್ಲಿ ನಡೆದಿದ್ದು, ವಿಚ್ಛೇದನವನ್ನು ಹಬ್ಬದಂತೆ ಸಂಭ್ರಮಿಸುವ ಮೂಲಕ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾನೆ.
2020ರಲ್ಲಿ ಮಂಜೀತ್ ಎಂಬ ಯುವಕ ಕೋಮಲ್ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಆರಂಭದಲ್ಲಿ ಅವರ ವೈವಾಹಿಕ ಜೀವನ ಸುಖಕರವಾಗಿದ್ದರೂ, ಸಮಯ ಕಳೆದಂತೆ ಭಿನ್ನಾಭಿಪ್ರಾಯಗಳು ಹೆಚ್ಚಾದವು. ಕೊನೆಗೆ, ದಂಪತಿಗಳು ಈ ವರ್ಷ ವಿಚ್ಛೇದನ ಪಡೆದರು.
ವಿಚ್ಛೇದನದ ನಂತರ, ಮಂಜೀತ್ ತನ್ನ ಮಾಜಿ ಪತ್ನಿಯ ಪ್ರತಿಮೆಯ ಮುಂದೆ ಪಾರ್ಟಿ ಆಯೋಜಿಸಿದರು. ಅಲ್ಲಿಯ ಬ್ಯಾನರ್ನಲ್ಲಿ ಅವರ ಮದುವೆ ಮತ್ತು ವಿಚ್ಛೇದನ ದಿನಾಂಕವನ್ನು ನಮೂದಿಸಲಾಗಿತ್ತು. ಈ ಪಾರ್ಟಿಯಲ್ಲೆ ಕೇಕ್ ಕಟ್ ಮಾಡಿ, ವಿಚ್ಛೇದನದ ಕ್ಷಣವನ್ನು ಸಂಭ್ರಮಿಸಿದರು. ಈ ಅಚ್ಚರಿಯ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೆಲವರು ಈ ವಿಡಿಯೋ ನೋಡಿ “ತಪ್ಪು ವ್ಯಕ್ತಿಯೊಂದಿಗೆ ಮದುವೆಯಾದ ಪರಿಣಾಮ” ಎಂದು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವು “ಮದುವೆಯಿಂದ ವ್ಯಕ್ತಿಗೆ ಎಷ್ಟು ನಿರಾಸೆ ಆಗಬಹುದು” ಎಂಬುದಕ್ಕೆ ಇದು ಉದಾಹರಣೆ ಎಂದು ಹೇಳಿದ್ದಾರೆ.