ಆಫ್ರಿಕಾ ಖಂಡದ ಕಾಂಗೋ ಗಣರಾಜ್ಯದಲ್ಲಿ ನಿಗೂಢ ಜ್ವರವೊಂದು ಕಾಣಿಸಿಕೊಂಡಿದೆ. ಈ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ 79 ಸಾವುಗಳು ಸಂಭವಿಸಿದೆ. ಈ ಜ್ವರದಿಂದ ವೈದ್ಯರು ಹಾಗೂ ವಿಜ್ಞಾನಿಗಳು ಬೆಚ್ಚಿಬಿದ್ದಿದ್ದಾರೆ. ಈ ಜ್ವರಕ್ಕೆ ಡಿಸೀಸ್ ಎಕ್ಸ್ ಎಂದು ನಾಮಕರಣ ಮಾಡಿದ್ದಾರೆ.
ಗಾಳಿಯಿಂದಲೇ ಈ ಜ್ವರ ಹರಡುತ್ತಿರುವುದು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, “ಎರಡು ವರ್ಷಗಳ ಹಿಂದೆ ಕೊರೊನಾ ಸಂದರ್ಭದಲ್ಲಿ ಲಾಕ್ಡೌನ್ ಮಾಡಿದ ರೀತಿ ಈಗಲೂ ಈ ನಿಗೂಢ ಜ್ವರ ಕೂಡ ಲಾಕ್ಡೌನ್ ಮಾಡಿಸುವ ಸಾಧ್ಯತೆಯಿದೆ” ಎಂದು ತಿಳಿದುಬಂದಿದೆ.
ಈ ಜ್ವರ 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅಕ್ಟೋಬರ್ 24ರಂದು ಕಾಂಗಾ ದೇಶದ ಕ್ವಾಂಗೋ ಪ್ರಾಂತ್ಯದಲ್ಲಿರುವ ಪೆಂಝಿ ಹೆಲ್ತ್ ಝೋನ್ ನಲ್ಲಿನ ಆಸ್ಪತ್ರೆಯಲ್ಲಿ ಮೊದಲ ಕೇಸ್ ಕಾಣಿಸಿಕೊಂಡಿತ್ತು. ಅವಾಗಿಂದ ಇಲ್ಲಿಯವರೆಗೂ ಸತತವಾಗಿ ಈ ಜ್ವರ ಹಲವಾರು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಜ್ವರ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ಮಕ್ಕಳಿಗೂ ಟೆಸ್ಟಿಂಗ್ ಮಾಡಿಸಲಾಗುತ್ತಿದೆ.