ರೈತರಿಗೆ ಪೂರ್ಣ ಪ್ರಮಾಣದ ಸಾಲ ಸಿಕ್ಕರೆ ಅದನ್ನು ಬಳಕೆ ಮಾಡಿ ಉತ್ಪಾದನೆ ಮಾಡುತ್ತಾನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಹೊಸ ಕೃಷಿ ಆರ್ಥಿಕ ನೀತಿ ತರಬೇಕು. ಕೃಷಿಯಲ್ಲಿ ಮಣ್ಣಿನ ಸಂರಕ್ಷಣೆ ಆಗಿದ್ದರೆ ಅದು ರೈತರಿಂದ ಮಾತ್ರ, ರೈತನ ಹೊಲಕ್ಕೆ ಯಾವ ವಿಜ್ಞಾನಿಯೂ ಹೋಗಿಲ್ಲ.
ಯಾವ ಸರ್ಕಾರವೂ ಹೋಗಿಲ್ಲ. ರೈತ ಮಣ್ಣಿನ ಫಲವತ್ತತೆ ಕಾಪಾಡಲು ಮಣ್ಣಿನ ಕೃಷಿ ಮಾಡುತ್ತಾನೆ. ಕೃಷಿ ವಿಶ್ವ ವಿದ್ಯಾಲಯಗಳು ರೈತರ ಭೂಮಿಯನ್ನು ಕ್ಯಾಂಪಸ್ ಮಾಡಿಕೊಂಡು ಅಲ್ಲಿ ಪ್ರಯೋಗ ಮಾಡಿ ಬೆಳೆ ಬೆಳೆದು ತೋರಿಸಿ, ಕೃಷಿ ವಿಶ್ವ ವಿದ್ಯಾಲಯಗಳು ರೈತರ ಜೊತೆ ಕುಳಿತು ಚರ್ಚಿಸಬೇಕು. ರೈತರಿಗೆ ಕೃಷಿಯಲ್ಲಿ ಸಾಮಾನ್ಯ ಹೆಚ್ಚಿರುತ್ತದೆ.
ನಾವು ವಿಧಾನಸಭೆಯಲ್ಲಿ ಎಸಿಯಲ್ಲಿ ಕುಳಿತು ಸಮಸ್ಯೆಯ ಬಗ್ಗೆ ಚರ್ಚೆ ಮಾಡುತ್ತೇವೆ. ರೈತರು, ಕೂಲಿ ಕಾರ್ಮಿಕರು ಸಮಸ್ಯೆಯ ಜೊತೆಗೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಕ್ಕೂ ಸಮಸ್ಯೆಯ ಜೊತೆಗೆ ಜೀವನ ಮಾಡುವುದಕ್ಕೂ ಬಹಳ ವ್ಯತ್ಯಾಸ ಇದೆ. ಎಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೋ ಅಲ್ಲಿಯೇ ಪರಿಹಾರ ಇದೆ.
ಈ ಮನೋಭಾವ ಬದಲಾವಣೆ ಆದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದ್ದರಿಂದ ಆಧುನಿಕತೆಯನ್ನು ಅಳವಡಿಸಿಕೊಳ್ಳುವಂಥದ್ದು, ರೈತರ ಭೂಮಿಯಲ್ಲಿ ಹೊಸ ಪ್ರಯೋಗ ಮಾಡುವಂಥದ್ದು, ನೈಸರಗಿಕ ಕೃಷಿ ಅಳವಡಿಸಿಕೊಳ್ಳುವುದು, ಮಣ್ಣಿನ ಸಾರ ಉಳಿಸಿಕೊಳ್ಳಬೇಕು ಎಂದರು.
ನಮಗೆ ಸ್ವಾತಂತ್ರ್ಯ ಬಂದಾಗ 33 ಕೋಟಿ ಜನಸಂಖ್ಯೆ ಇತ್ತು. ಈಗ 133 ಕೋಟಿ ಆಗಿದೆ. 33 ಕೋಟಿ ಜನಸಂಖ್ಯೆ ಇದ್ದಾಗ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳುತ್ತಿದ್ದೇವು. ಈಗ 133 ಕೋಟಿ ಜನಸಂಖ್ಯೆ ಆದರೂ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿದ್ದೇವೆ. ಕೃಷಿ ಬೆಳೆದಿದೆ. ಆದರೆ, ಕೃಷಿ ಬೆಳೆಸಿದ ರೈತ ಎಲ್ಲಿದ್ದಾನೋ ಅಲ್ಲಿಯೇ ಇದ್ದಾನೆ.
ಈಗೇನಾದರೂ ಹೊಸ ನೀತಿ ಮಾಡಿದರೆ ರೈತನನ್ನು ಗಟ್ಟಿಗೊಳಿಸಬೇಕು. ರೈತನ ಮನೆಯಲ್ಲಿ ಮದುವೆ ಆದರೆ, ಸಾಲ ಮಾಡಬೇಕು, ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಸಾಲ ಮಾಡಬೇಕು. ರೈತ ಕೇಂದ್ರಿತ ಆಲೋಚನೆ ಮಾಡುವ ಅಗತ್ಯವಿದೆ. ಅಂದಾಗ ಮಾತ್ರ ರೈತರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಹೇಳಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc