ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ನದಿಗೆ ಆರತಿ ಕಾರ್ಯಕ್ರಮ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಕೃಷಿ ಸಚಿವ ಚಲುವ ರಾಯಸ್ವಾಮಿ ನೇತೃತ್ವದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಉತ್ತರಾಖಂಡದ ಹರಿದ್ವಾರ ಹಾಗೂ ಉತ್ತರಪ್ರದೇಶದ ವಾರಾಣಸಿಗೆ ಸೆ.20ರಿಂದ 3 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಕಾವೇರಿ ಆರತಿ ಮಾಡುವ ಕಾರ್ಯಕ್ರಮ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅದಕ್ಕೆ ಸಂಬಂಧಿಸಿದಂತೆ ಹರಿದ್ವಾರ ಮತ್ತು ವಾರಾಣಸಿಯಲ್ಲಿ ನಡೆಯಲಿರುವ ಗಂಗಾ ಆರತಿಯ ಆಯೋಜನೆ, ವಿಧಾನಗಳ ಕುರಿತು ಅಧ್ಯಯನ ನಡೆಸಲು ತಂಡವು ಪ್ರವಾಸ ಕೈಗೊಳ್ಳುತ್ತಿದೆ. ಅಧ್ಯಯನ ತಂಡದಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಮಾಗಡಿ ಬಾಲಕೃಷ್ಣ, ರಮೇಶ್ ಬಾಬು ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಕೆ.ಎಂ.ಉದಯ್, ರವಿಕುಮಾರ್, ಶಿವಲಿಂಗೇಗೌಡ, ಕೊಳ್ಳೆಗಾಲ ಕೃಷ್ಣಮೂರ್ತಿ ಸೇರಿ ಇನ್ನಿತರ ಜನಪ್ರತಿನಿಧಿಗಳು, ಜಲಸಂಪನ್ಮೂಲ, ಕನ್ನಡ ಸಂಸ್ಕೃತಿ ಇಲಾಖೆ ಸೇರಿ ಇನ್ನೂ ಕೆಲ ಇಲಾಖೆಗಳ ಅಧಿಕಾರಿಗಳು ಇರಲಿದ್ದಾರೆ.