ದಿ ವೆಯ್ಟ್ ಈಸ್ ಓವರ್. ಎಲ್ಲರೂ ಕಾತರದಿಂದ ಕಾಯ್ತಿದ್ದ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಒಂದು ವಿಡಿಯೋ ಝಲಕ್ ಕೊನೆಗೂ ರಿವೀಲ್ ಆಗಿದೆ. ಇಂದು 39ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿರೋ ರಾಕಿಭಾಯ್, ಟಾಕ್ಸಿಕ್ ಚಿತ್ರದ ಒಂದು ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಟಾಕ್ಸಿಕ್ ಬರ್ತ್ ಡೇ ಪೀಕ್ ಟೈಟಲ್ ನಲ್ಲಿ ಒಂದು ಸಣ್ಣ ಟೀಸರ್ ಮೂಲಕ ಚಿತ್ರದ ಗತ್ತು, ಗಮ್ಮತ್ತು ತಿಳಿಸೋ ಪ್ರಯತ್ನ ಮಾಡಿದ್ದಾರೆ. ಮೊದಲಿನಿಂದಲೂ ಟಾಕ್ಸಿಕ್ ಚಿತ್ರ ಡ್ರಗ್ ಮಾಫಿಯಾ ಕುರಿತ ಕಥಾನಕ ಹೊಂದಿರಲಿದೆ ಎನ್ನಲಾಗ್ತಿತ್ತು. ಅದು ನಿಜವೂ ಹೌದು. ಪರಾಸೋ ಅನ್ನೋ ಫೇಮಸ್ ಇಂಟರ್ ನ್ಯಾಷನಲ್ ಪಬ್ ಗೆ ಯಶ್ ಎಂಟ್ರಿ ಕೊಡೋ ದೃಶ್ಯದ ಮೂಲಕ ಟಾಕ್ಸಿಕ್ ಚಿತ್ರದ ಅಸಲಿಯತ್ತೇನು ಅನ್ನೋದನ್ನ ಸಿನಿದುನಿಯಾಗೆ ಸಾರಲಾಗಿದೆ. ಇಲ್ಲಿ ಯಶ್ ಕೌಬಾಯ್ ಗೆಟಪ್ ನಲ್ಲಿ ದೊಡ್ಡ ಸಿಗಾರ್ ಜೊತೆ ಖಡಕ್ ಲುಕ್ ಕೊಟ್ಕೊಂಡು ಕಾರ್ ಇಳಿದು ಬರೋ ದೃಶ್ಯ ವ್ಹಾವ್ ಫೀಲ್ ತರಿಸುತ್ತೆ. ಅದರಲ್ಲೂ ರಾಕಿಭಾಯ್ ಗೆ ಒಂದು ಸ್ವ್ಯಾಗ್ ಇದೆ. ಆ ಸ್ವ್ಯಾಗ್ ಗೆ ನೋಡುಗರು ಬೋಲ್ಡ್ ಆಗೋದು ಕನ್ಫರ್ಮ್. ಅಲ್ಲದೆ, ಆ ಪಬ್ ನಲ್ಲಿ ತರಹೇವಾರಿ ಡ್ರಗ್ಸ್ ಬಳಕೆಯಾಗೋ ಪರಿ, ಹೆಣ್ಣಿನ ಗ್ಲಾಮರ್ ಹೀಗೆ ಹತ್ತಾರು ಕಿಕ್ ಗಳ ದೃಶ್ಯಗುಚ್ಚ ಅನಾವರಣಗೊಂಡಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾಗೆ ಇಂಟರ್ ನ್ಯಾಷನಲ್ ಟೆಕ್ನಿಷಿಯನ್ಸ್ ಕೆಲಸ ಮಾಡ್ತಿರೋದು ಚಿತ್ರದ ಈ ಟೀಸರ್ ಝಲಕ್ ನಿಂದ ಗೊತ್ತಾಗ್ತಿದೆ. ಮೇಕಿಂಗ್ ಹಾಲಿವುಡ್ ಸಿನಿಮಾ ರೇಂಜ್ ಗಿದ್ದು, ಅಬ್ಬಬ್ಬಾ.. ನಮ್ಮ ಹೆಮ್ಮೆಯ ಕನ್ನಡಿಗನ ಸಿನಿಮಾ ಪ್ರೀತಿಗೆ ಸಲಾಂ ಅಂತಿದ್ದಾರೆ ಚಿತ್ರಪ್ರೇಮಿಗಳು. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಯಶ್ ಅವರು ತಮ್ಮದೇ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಯಶ್ ಸ್ಟೈಲಿಶ್ ಲುಕ್ಸ್ ಸ್ಯಾಂಡಲ್ ವುಡ್ ನಿಂದ ಹಾಲಿವುಡ್ ವರೆಗೂ ಟಾಕ್ ಆಗುವಂತಿವೆ.