ತನ್ನ ಗಂಡನ ಮೇಲೇ ಹುಲಿ ದಾಳಿ ಮಾಡಿದ್ದನ್ನು ನೋಡಿ ಮಹಿಳೆಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ಹುಲಿಯೊಂದಿಗೆ ಹೋರಾಡಿ ಗಂಡನ ಪ್ರಾಣ ಉಳಿಸಿದ್ದಾಳೆ. ಮಹಿಳೆಯ ಈ ಧೈರ್ಯ ಮತ್ತು ಸಾಹಸಕ್ಕೆ ತೆಲಂಗಾಣ ಮೆಚ್ಚುಗೆ ವ್ಯಕ್ತಪಡಿಸಿದೆ. ತೆಲಂಗಾಣದ ಆಸಿಫಾಬಾದ್ ನಸಿರ್ಪುರ ಮಂಡಲದ ದುಬ್ಬಗುಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸುಜಾತಾ ಎಂಬ ರೈತ ಮಹಿಳೆ ಹುಲಿಯೊಂದಿಗೆ ಹೋರಾಡಿ ತನ್ನ ಗಂಡನ ಪ್ರಾಣ ಉಳಿಸಿದ್ದಾರೆ. ಸುಜಾತ ಎಂಬ ಮಹಿಳೆ ತಮ್ಮ ಹೊಲದಲ್ಲಿ ಹತ್ತಿ ಬಿಡುಸುತ್ತಿದ್ದರು. ಇದೇ ವೇಳೇ ತನ್ನ ಪತಿ ಸುರೇಶ್ ಎತ್ತಿನಗಾಡಿಯಲ್ಲಿ ಹೊಲಕ್ಕೆ ಬರುತ್ತಿದ್ದರು. ಅಲ್ಲೇ ಪೊದೆಯಲ್ಲಿ ಅಡಗಿ ಕುಳಿತಿದ್ದ ಹುಲಿಯೊಂದು ಹೊಲೆಕ್ಕೆ ಬರುತ್ತಿದ್ದ ಸುರೇಶ್ ಮೇಲೆ ಏಕಾಎಕಿ ದಾಳಿ ಮಾಡಿದೆ. ಸುರೇಶ್ ಕೂಗಿಕೊಳ್ಳುತ್ತಿದ್ದಂತೆ ಪತ್ನಿ ಸುಜಾತಾ ಓಡಿಬಂದು ಪಕ್ಕದಲ್ಲಿದ್ದ ಕಲ್ಲು ಕೋಲಿನಿಂದ ಹುಲಿಗೆ ಹೊಡೆದಿದ್ದಾಳೆ. ಜೋರಾಗಿ ಸುಜಾತಾ ಕಿರುಚಿಕೊಳ್ಳುತ್ತಾ ಹುಲಿಯನ್ನು ಹಿಮ್ಮಟ್ಟಿಸಿದ್ದಾಳೆ. ಆದರೆ ಅಷ್ಟರ ಹೊತ್ತಿಗೆ ಹುಲಿ ಅವರ ಕತ್ತು, ಎದೆಯ ಭಾಗದಲ್ಲಿ ಪರಚಿತ್ತು. ಗಂಭೀರವಾಗಿ ಗಾಯಗೊಂಡಿರುವ ಸುರೇಶ್ನನ್ನು ಸ್ಥಳೀಯ ರೈತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮಾತನಡಿರುವ ಸುಜಾತಾ, ಹುಲಿ ದಾಳಿ ಮಾಡಿದಾಗ ನನಗೆ ನನ್ನ ಪತಿ ಪ್ರಾಣ ಉಳಿಸುವುದಷ್ಟೇ ಯೋಚನೆಯಾಗಿತ್ತು. ನಾನು ಸ್ವಲ್ಪ ಹಿಂಜರಿದಿದ್ದರೂ ಪತಿಯನ್ನು ಕಳೆದುಕೊಳ್ಳುತ್ತಿದೆ. ನಾನು ಸ್ವಲ್ಪ ಯೋಚನೆ ಮಾಡಿದ್ದರೂ ನನ್ನ ಪತಿಯನ್ನು ಕಳೆದುಕೊಳ್ಳುತ್ತಿದ್ದೆ. ಒಂದು ಕ್ಷಣವೂ ಯೋಚಿಸದೆ ನನ್ನ ಪತಿಯನ್ನು ರಕ್ಷಿಸಿಕೊಳ್ಳಲು ಮುಂದಾದೆ ಎಂದು ತಿಳಿಸಿದ್ದಾರೆ . ಮಹಿಳೆಯ ಈ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.