- ಲುಂಗಿ ತೊಟ್ಟು ಲಂಡನ್ನ ಬೀದಿ ಬೀದಿ ಸುತ್ತಿದ ಯುವತಿ
- ಇಂಗ್ಲೇಂಡ್ ಜನರ ರಿಯಾಕ್ಷನ್ ನೋಡಲು ಲುಂಗಿ ತೊಟ್ಟಯುವತಿ
ಲಂಡನ್ : ಗ್ರಾಮೀಣ ಭಾಗದಲ್ಲಿನ ಪುರುಷರು ಇಂದಿಗೂ ಮನೆಗಳಲ್ಲಿ ಅಥವಾ ಊರಿನಲ್ಲಿ ಸುತ್ತಾಡುವಾಗ ಲುಂಗಿಯನ್ನೆ ಸುತ್ತಿಕೊಂಡು ಓಡಾಡುತ್ತಾರೆ. ಆದರೆ ಇಲ್ಲೊರ್ವ ಯುವತಿ ಕೂಡ ಲುಂಗಿ ತೊಟ್ಟು ಲಂಡನ್ ಬೀದಿ ಬೀದಿ ಸುತ್ತಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗ್ತಿದೆ.
ಕಂಟೆಂಟ್ ಕ್ರಿಯೆಟರ್ ವವೇರಿ ಎಂಬ ಯುವತಿ ಇಂಗ್ಲೇಂಡ್ ಜನರ ರಿಯಾಕ್ಷನ್ ಹೇಗಿರುತ್ತೆ ಎಂಬುದನ್ನು ನೋಡಲು ಲುಂಗಿ ತೊಟ್ಟು ಲಂಡನ್ನ ಬೀದಿ ಬೀದಿ ಸುತ್ತಾಡಿದ್ದಾಳೆ. ಈ ವಿಡಿಯೋವನ್ನು ಆಕೆ ತನ್ನ ಇನ್ಸ್ಟಾಗ್ರಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.