- 10 ವರ್ಷದ ಹಳೆಯ ಆಧಾರ್ ಕಾರ್ಡ್ನ್ನು ಅಪ್ಡೇಟ್ ಮಾಡಿಸಬೇಕು
- ಆಧಾರ್ ನೀಡುವ ಸಂಸ್ಥೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ತಿಳಿಸಿದೆ
- ಆನ್ಲೈನ್ನಲ್ಲಿ ಅಪ್ಡೇಟ್ ಮಾಡಿಸುವ ಆಯ್ಕೆಯನ್ನು ಸಂಸ್ಥೆ ನೀಡಿದೆ
ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ ನ್ನು ಅಪ್ಡೇಟ್ ಮಾಡಿಸದಿರುವ ಭಾರತೀಯ ನಾಗರಿಕರು ತಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಿಸಬೇಕು ಎಂದು ಎಂದು ಆಧಾರ್ ನೀಡುವ ಸಂಸ್ಥೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿತ್ತು. ಅಸಲಿಗೆ ಈ ಬಗ್ಗೆ ಹರಡಿರುವ ವದಂತಿ ಏನು? ವಾಸ್ತವ ಏನು? ಇಲ್ಲಿದೆ ಮಾಹಿತಿ.
ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ ನ್ನು ಅಪ್ಡೇಟ್ ಮಾಡಿಸದಿರುವ ಭಾರತೀಯ ನಾಗರಿಕರು ತಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಿಸಬೇಕು ಎಂದು ಆಧಾರ್ ನೀಡುವ ಸಂಸ್ಥೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೇಳಿದೆ. ಈ ಕಾರಣಕ್ಕಾಗಿಯೇ ಜೂನ್ 14ರವರೆಗೆ ಹಳೆಯ ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡಿಸುವ ಆಯ್ಕೆಯನ್ನು ಸಂಸ್ಥೆ ನೀಡಿದೆ.
ಅಪ್ಡೇಟ್ ಮಾಡಿಸಲಿಲ್ಲ ಅಂದರೆ ಏನಾಗತ್ತೆ..?
ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಿಸಲು ಜೂನ್ 14ರಂದು ಕೊನೆಯ ದಿನವಾಗಿದೆ. ಆದರೆ ಅದರ ನಂತರ ಹಳೆಯ ಆಧಾರ್ ಕಾರ್ಡ್ ಅಮಾನ್ಯವಾಗುವುದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. ಈ ದಿನಾಂಕದ ಬಳಿಕ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ಮಾಡಿಸಲಾಗುವುದಿಲ್ಲ.
ಅಪ್ಡೇಟ್ ಮಾಡಿಸುವುದು ಹೇಗೆ?
ಕಾರ್ಡ್ ಹೊಂದಿರುವವರು ಅದನ್ನು ಆನ್ಲೈನ್ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಿಸಬೇಕಾಗುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿರುವ ಅಧಿಕೃತ ವೆಬ್ ಸೈಟ್ https://myaadhaar.uidai.gov.in/ ಗೆ ಭೇಟಿ ನೀಡಿ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ ಒಂದು ಬಾರಿಯ ಪಾಸ್ವರ್ಡ್ (OTP) ಬಳಸಿ ಲಾಗ್ ಇನ್ ಮಾಡಬೇಕು.