ವೀರೇಶ ದಾನಿ
ಹಿರಿಯ ರಾಜಕೀಯ ವರದಿಗಾರ
ಇದು ಕಾಕತಾಳಿಯೋವೋ.. ಆಶ್ಚರ್ಯವೋ ಗೊತ್ತಿಲ್ಲ. ಆದ್ರೆ ಅದೊಂದು ಘಟನೆ ಮಾತ್ರ ಎಸ್ ಎಂ ಕೃಷ್ಣ ಬದುಕಿನಲ್ಲಿ ನಿಜಕ್ಕೂ ಆಶ್ಚರ್ಯ ಅನ್ನೋದು ಮಾತ್ರ ಸುಳ್ಳಲ್ಲ. ಯಾಕಂದ್ರೆ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಅದೊಂದು ಸಂಕಲ್ಪ ಪೂರ್ಣಗೊಂಡ ಬಳಿಕವೇ ಪ್ರಾಣ ಬಿಟ್ಟಿರುವುದು ಇದೀಗ ಸಾಕಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅಂದ್ರೆ ಕೆಲವರಿಗೆ ಈ ಹೆಸರು ಯಾರದು ಅನಿಸಬಹುದು. ಆದ್ರೆ ಎಸ್ ಎಂ ಕೃಷ್ಣ ಅಂದ್ರೆ ಸಾಕು ರಾಜ್ಯ ಅಷ್ಠೇ ಅಲ್ಲ ದೇಶ ವಿದೇಶದಲ್ಲೂ ಈ ಹೆಸರಿಗೆ ಖ್ಯಾತಿ ಇದೆ. ಹೌದು. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ, ರಾಜ್ಯಸಭಾ ಸದಸ್ಯ ಅಷ್ಠೆ ಅಲ್ಲ ಸಿಎಂ ಆಗಿ ವಿದೇಶಾಂಗ ಖಾತೆ ಸಚಿವರಾಗಿ, ರಾಜ್ಯಪಾಲರಾಗಿ ಸುದೀರ್ಘ ಕಾಲ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ ಎಸ್ ಎಂ ಕೃಷ್ಣ ಇದೀಗ ನಮ್ಮೊಂದಿಗಿಲ್ಲ. ಆದ್ರೆ ಅವರ ಜೀವನದ ಕೊನೆಗಾಲದಲ್ಲಿ ನಡೆದ ಅದೊಂದು ಘಟನೆ ಇಂದು ಎಲ್ಲರನ್ನೂ ಆಶ್ಚರ್ಯಚಕಿತ ಮಾಡಿರುವುದಂತೂ ಸುಳ್ಳಲ್ಲ..
ಸೌಮ್ಯ ಸ್ವಭಾವದ ರಾಜಕಾರಣಿ, ಶತ್ರುತ್ವವೇ ಕಾಣದ ಸಭ್ಯ ರಾಜಕಾರಣಿ ಅಂದ್ರೆ ಅದು ಎಸ್ ಎಂ ಕೃಷ್ಣ ಮಾತ್ರ. ಹೌದು ಆರು ದಶಕಗಳ ಕಾಲ ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಉನ್ನತ ಹುದ್ದೆಗಳನ್ನ ನಿಭಾಯಿಸಿದ ಎಂಎಸ್ ಕೃಷ್ಣ ದೇಶ ವಿದೇಶ ಸುತ್ತಿದ್ರೂ ಸ್ವಂತ ಊರನ್ನ ಯಾವತ್ತು ಮರೆಯಲಿಲ್ಲ. ಹುಟ್ಟೂರಿನ ಹೆಸರಿನಿಂದಲೇ ಆರಂಭವಾದ ಅವರ ಜೀವನ ಹುಟ್ಟೂರಿನಲ್ಲಿ ಅಂತ್ಯಗೊಂಡಿದೆ. ಆದ್ರೆ ಹುಟ್ಟೂರಿನ ಜೊತೆ ಅವರಿಗಿದ್ದ ಅವಿನಾಭಾವ ಸಂಭಧ ಇದೀಗ ಆಶ್ಚರ್ಯಕ್ಕೆ ಕಾರಣವಾಗಿದೆ.
ಹೌದು, ಎಸ್ ಎಂ ಕೃಷ್ಣ ಹೆಚ್ಚಾಗಿ ಬೆಂಗಳೂರಿನಲ್ಲೇ ವಾಸವಾಗಿದ್ರೂ ಹುಟ್ಟೂರನ್ನ ಯಾವತ್ತು ಮರೆಯಲಿಲ್ಲ. ಮಂಡ್ಯ ಮದ್ದೂರಿಗೆ ಹೋದಾಗ. ವಿಶೇಷ ಕಾರ್ಯಕ್ರಮಗಳು ಇದ್ದಾಗ ಎಸ್ ಎಂ ಕೃಷ್ಣ ಹುಟ್ಟೂರಿಗೆ ಹೋಗಿ ಬರುತ್ತಿದ್ದರು. ಹುಟ್ಟೂರಿಗೆ ಹೋದಾಗೆಲ್ಲಾ ಅವರು ಗ್ರಾಮದ ಅದೊಂದು ದೇವಾಲಯಕ್ಕೆ ತಪ್ಪಿಸದೇ ಹೋಗಿ ದರ್ಶನ ಪಡೆದುಕೊಂಡು ಬರುತ್ತಿದ್ದರು. ಸೋಮನಹಳ್ಳಿ ಗ್ರಾಮದ ಆ ದೇವಿಯ ಆರ್ಶಿವಾದ ಅವರನ್ನ ಕೊನೆಗೂ ಕೈಬಿಡಲಿಲ್ಲ ಅನ್ನೋದು ಸಹ ಸುಳ್ಳಲ್ಲ.
ಎಸ್.ಎಂ ಕೃಷ್ಣ ಅವರು ಸಾವಿನಲ್ಲಿಯೂ ತಮ್ಮ ಹುಟ್ಟೂರಿಗೆ ಒಳಿತನ್ನೇ ಬಯಸುವ ಮೂಲಕ ದೇವಸ್ಥಾನಗಳ ಜೀರ್ಣೋದ್ಧಾರಗೊಳಿಸಿದ್ದರು. ಮಂಡ್ಯ ಜಿಲ್ಲೆಯವರಾದ ಎಸ್.ಎಂ ಕೃಷ್ಣ ಅವರು ತಮ್ಮ ಹುಟ್ಟೂರು ಸೋಮನಹಳ್ಳಿಯಲ್ಲಿ
ಅಭಯ ಆಂಜನೇಯಸ್ವಾಮಿ, & ಮಾರಮ್ಮ ಹಾಗೂ ಬೋರೆದೇವೇರ ದೇವಸ್ಥಾನಗಳನ್ನು ತಮ್ಮ ಸ್ವತಂ ದುಡ್ಡಿನಲ್ಲಿ ಸುಮಾರು 45 ಲಕ್ಷ ರೂಪಾಯಿ ಖರ್ಚು ಮಾಡಿ ಜೀರ್ಣೋದ್ಧಾರ ಮಾಡಿಸಿದ್ದರು
ಮಂಡಲ ಪೂಜೆ ಸಂಕಲ್ಪ ಸಾವನ್ನೇ ಮುಂದೂಡಿತೇ?
ದೇವಸ್ಥಾನ ಜೀರ್ಣೋದ್ಧಾರದ ನಂತರ ಮಂಡಲ ಪೂಜೆ ಪೂಜೆ ಮಾಡುವಾಗಲೇ ಎಸ್ ಎಂ ಕೃಷ್ಣ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಆದ್ರೆ ಅವರೇ ಜೀಣೋದ್ದಾರ ಮಾಡಿದ ಆ ದೇವಾಲಯದಲ್ಲಿ 48 ದಿನಗಳ ಮಂಡಲ ಪೂಜೆ ನೆರವೇರಿಸಬೇಕಿತ್ತು. ಸಂಕಲ್ಪ ಹೊತ್ತಿದ್ದ ಎಸ್ ಎಂ ಕೃಷ್ಣ ಸಂಕಲ್ಪ ಪೂಜೆಯಲ್ಲಿ ಭಾಗಿಯಾಗಲು ಆಗದಿದ್ದರೂ ಅವರ ಪುತ್ರಿ ಶಾಂಭವಿ ಸಂಕಲ್ಪದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದರು. ಆದ್ರೆ ದೇವರ ಆರ್ಶಿವಾದವೋ.. ಕಾಕತಾಳೀಯೋ ಎಂಬಂತೆ 48 ದಿನಗಳ ಮಂಡಲ ಪೂಜೆ ಬಳಿಕ ಸಾವನ್ನಪ್ಪಿದ್ದಾರೆ. ಒಂದು ವೇಳೆ ಪೂಜೆಯ ಮಧ್ಯೆಯೇ ಸಾವನ್ನಪ್ಪಿದ್ದರೆ ಮಂಡಲ ಪೂಜೆ ಅಪೂರ್ಣವಾಗುತ್ತಿತ್ತು. ದೇವರ ಆಶಯವೆಂಬಂತೆ ಪೂಜೆ ಮುಗಿದ ಬಳಿಕ ಎಸ್ಎಂಕೆ ಕೊನೆಯುಸಿರೆಳೆದಿದ್ದಾರೆ. ಸಾವಲ್ಲೂ ಗ್ರಾಮಕ್ಕೆ ಒಳಿತನ್ನೇ ಬಯಸಿದ್ದ ಎಸ್ಎಂ ಕೃಷ್ಣ ಅವರು ಹುಟ್ಟೂರಿಗೆ ಸಲ್ಲಿಸಿದ್ದ ಸೇವೆಯನ್ನು ನೆನದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಾವುಕರಾಗಿದ್ದರೆ, ಗ್ರಾಮದ ಆ ದೇವಿಯ ಕೃಪೆ – ಆಂಜನೇಯನ ಅಭಯ ಅವರನ್ನ ಕೊನೆಗೂ ಕೈಬಿಡಲಿಲ್ಲ ಅಂತಾ ಆಶ್ಚರ್ಯ ವ್ಯಕ್ತಪಡಿಸುತ್ತಿರುವುದು ಸುಳ್ಳಲ್ಲ.