ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಟೈಂ ನಿಜವಾಗಲೂ ಸರಿ ಇಲ್ಲ ಅನ್ಸುತ್ತೆ. ವಿವಾದಗಳ ಮೇಲೆ ವಿವಾದಗಳನ್ನ ಎಳೆದುಕೊಳ್ಳುತ್ತಿರುವ ನಟ ಅಲ್ಲು ಅರ್ಜುನ್ ಅವರ ಮೇಲೆ ತೆಲಂಗಾಣ ಎಸಿಪಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ಇದೀಗ ನಟ ಅಲ್ಲು ಅರ್ಜುನ್ ಮನೆ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿರುವ ನಟ ಅಲ್ಲು ಅರ್ಜುನ್ ಮನೆ ಮೇಲೆ ಒಯು ಜೆಎಸಿ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅಲ್ಲು ಅರ್ಜುನ್ ಮನೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಮನೆಯ ಹೊರಾಂಗಣದಲ್ಲಿದ್ದ ಹೂವಿನ ಕುಂಡಗಳನ್ನು ಧ್ವಂಸಗೊಳಿಸಲಾಗಿದೆ. ಇದರ ಜೊತೆಗೆ ಅಲ್ಲು ಅರ್ಜುನ್ ಮನೆಗೆ ಕಲ್ಲು ಎಸೆಯಲಾಗಿದೆ. ರೇವತಿ ಸಾವಿಗೆ ಅಲ್ಲು ಅರ್ಜುನ್ ಕಾರಣ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಿ ಪ್ರತಿಭಟಿಸಿದ್ದಾರೆ. ರೇವತಿ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.