ಹೈದರಾಬಾದ್ ನಗರದ ಅಕ್ರಮ ಕಟ್ಟಡಗಳನ್ನು ತೆರವು ಮಾಡುತ್ತಿರುವ ಹೈಡ್ರಾ ಅಥಾರಿಟಿಯು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸೇರಿದ ಐಷಾರಾಮಿ ಎನ್-ಕನ್ವೆಷನ್ ಸೆಂಟರ್ಅನ್ನು ತೆರವುಗೊಳಿಸಿದೆ. ಹೈದರಾಬಾದ್ ನ ಮಾದಾಪುರದಲ್ಲಿ ನಿರ್ಮಾಣವಾಗಿದ್ದ ಎನ್ ಕನ್ವೆನ್ಷನ್ ಸೆಂಟರ್ಅನ್ನು ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಅಂಡ್ ಅಸೆಟ್ಸ್ ಮಾನಿಟರಿಂಗ್ ಅಂಡ್ ಪ್ರೊಟೆಕ್ಷನ್ ಅಧಿಕಾರಿಗಳು ಜೆಸಿಬಿಗಳ ಮೂಲಕ ಧ್ವಂಸ ಮಾಡಿದ್ದರು. ಇನ್ನೂ ನಟ ನಾಗಾರ್ಜುನ, “ಕನ್ವೆನ್ಷನ್ ಹಾಲ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಯಾವುದೇ ನೋಟಿಸ್ ನೀಡದೆ ತಮಗೆ ಸಂಬಂಧಿಸಿದ ಕಟ್ಟಡವನ್ನ ಕೆಡವಲಾಗಿದೆ” ಎಂದು ಆರೋಪಿಸಿದ್ದಾರೆ.
ಈ ವಿಚಾರವಾಗಿ ಇಂದು ಕೋರ್ಟ್ ಮೆಟ್ಟಿಲೇರಿದ್ದ ನಟ ನಾಗಾರ್ಜುನ್ ಗೃಹ ಮನವಿ ಅರ್ಜಿ ಸಲ್ಲಿಸಿದ್ದರು. ಸದ್ಯ ನೆಲಸಮ ನಿಲ್ಲಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅದರಂತೆ ಧ್ವಂಸ ಕಾರ್ಯಾಚರಣೆಯನ್ನ ಸ್ಥಗಿತಗೋಳಿಸಲಾಗಿದೆ.