ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಮತ್ತು ಜಾಹ್ನವಿ ಅಭಿನಯದ ಸಿನಿಮಾ ಅಧಿಪತ್ರ. ಬಹುದಿನಗಳಿಂದ ಸುದ್ದಿ ಮಾಡ್ತಿದ್ದ ಅಧಿಪತ್ರ ಇದೀಗ ಟೀಸರ್ ಬಿಡುಗಡೆ ಮಾಡಿದೆ.
ಟೀಸರ್ ನೋಡ್ತಿದ್ರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅನ್ನೋದನ್ನ ಗೆಸ್ ಮಾಡಬಹುದು. ಉಡುಪಿ ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.
ಇನ್ನು ಟೀಸರ್ ರಿಲೀಸ್ ಕೆಲವೇ ಗಂಟೆಗಳಲ್ಲಿ ಸಾವಿರಗಟ್ಟಲೆ ವ್ಯೂಸ್ ಪಡೆದುಕೊಂಡಿದೆ. ಅಲ್ಲದೇ ಚಿತ್ರದ ಆಡಿಯೋ ಹಕ್ಕನ್ನು ಈಗಾಗಲೇ ಭಾರೀ ಮೊತ್ತಕ್ಕೆ ಲಹರಿ ಆಡಿಯೋ ಸಂಸ್ಥೆ ಖರೀದಿ ಮಾಡಿದೆ.
ಚಿತ್ರದಲ್ಲಿ ನಟ ರೂಪೇಶ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು , ಚಯಾನ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ…ಕೆಎಎಆರ್ ಸಿನಿ ಕಂಬೈನ್ಸ್ ನಿರ್ಮಾಣ ಮಾಡಿದೆ..