ನವದೆಹಲಿ: ಇನ್ನೂ ಮುಂದೆ ಜನಕ್ಕೆ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಸೆಲೆಬ್ರೆಟಿಸ್ ಮತ್ತು ಇನ್ಫ್ಲೂಯೆನ್ಸರ್ಗಳೆ ಸಮಾನ ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಜಾಹೀರಾತುಗಳನ್ನು ಪ್ರಸಾರ ಮಾಡುವ ಮುಂಚೆ ಸ್ವಯಂ ಘೋಷಣೆ ಸಲ್ಲಿಸಬೇಕು. ಅಡ್ವ್ಟೈಸ್ಮೆಂಟ್ ರೂಲ್ಸ್ಗಳಿಗೆ ಬದ್ಧರಾಗಿದ್ದು, ಪ್ರಸಾರ ಮಾಡುತ್ತಿರುವ ಜಾಹೀರಾತು ಕೂಡಾ ನಿಯಮಕ್ಕೆ ಅನುಗುಣವಾಗಿದೆ ಎಂದು ಖಚಿತ ಪಡಿಸಬೇಕು ಎಂದು ಆದೇಶಿಸಿದೆ. ಈ ಹಿಂದೆ ಪತಂಜಲಿ ಪ್ರಕರಣದ ಹಿನ್ನೆಲೆ ಜಾಹೀರಾತುಗಳ ಕುರಿತಾದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಸೂಚನೆಗಳನ್ನ ನೀಡಿದೆ.
ಏನಿದು ಪತಂಜಲಿ ಪ್ರಕರಣ ?
ಈ ಹಿಂದೆ ಸುಪ್ರೀಂ ಪತಂಜಲಿಯ ಕೆಲ ಉತ್ಪನ್ನಗಳ ಜಾಹೀರಾತುಗಳನ್ನು ಕೈ ಬಿಡುವಂತೆ ಆದೇಶಿಸಿತ್ತು. ದಾರಿತಪ್ಪಿಸುವ ಜಾಹೀರಾತುಗಳಿಗಾಗಿ ಕ್ಷಮೆಯಾಚಿಸಿ. ಏಪ್ರಿಲ್ 16 ರಂದು, ಪತಂಜಲಿ ಆಯುರ್ವೇದ್, ರಾಮ್ದೇವ್ ಮತ್ತು ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಅವರು ಸುಪ್ರೀಂ ಕೋರ್ಟ್ನಲ್ಲಿ ಕ್ಷಮೆಯಾಚಿಸಿದ್ದರು. ಏಪ್ರಿಲ್ 23 ರಂದು ಸುಪ್ರೀಂ ಕೋರ್ಟ್ ಪತಂಜಲಿಯ ವಕೀಲರಿಗೆ ಕ್ಷಮೆಯಾಚನೆಯ ಜಾಹೀರಾತುಗಳ ಪ್ರತಿಯನ್ನು ದಾಖಲೆಗೆ ತರುವಂತೆ ಕೇಳಿತ್ತು. ಪ್ರಕಟವಾದ ಕ್ಷಮಾಪಣೆಗೆ ಸಂಬಂಧಿಸಿದ ಪ್ರಕರಣವು ಏಪ್ರಿಲ್ 30 ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಂದಿತ್ತು.