ಭಾರತದ ಮೋಸ್ಟ್ ವಾಂಟೆಡ್ ಉಗ್ರ ಸಂಘಟನೆ ಜೈಶ್ ನಾಯಕ ಮಸೂದ್ ಅಜರ್ ಹೃದಯಾಘಾತವಾಗಿದೆ. ಮಸೂದ್ ಅಜರ್ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದನು. ಇಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹೃದಯಾಘಾತದ ನಂತರ ತಕ್ಷಣವೇ ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು. ಮಸೂದ್ ಅಜರ್ ಅವನ್ನು ಕರಾಚಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಸ್ಲಾಮಾಬಾದ್ನಿಂದ ಹೃದ್ರೋಗ ತಜ್ಞರು ಕೂಡ ಕರಾಚಿ ತಲುಪುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಖೋಸ್ಟ್ ಪ್ರಾಂತ್ಯದ ಗೋರ್ಬಾಜ್ ಪ್ರದೇಶದ ಮೂಲಕ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಅವರನ್ನು ರಾವಲ್ಪಿಂಡಿಯ ಅತಿದೊಡ್ಡ ಮತ್ತು ಅತ್ಯಂತ ಸುಸಜ್ಜಿತ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ ಇದೆ. ಪಾಕಿಸ್ತಾನವು ಭಯೋತ್ಪಾದಕ ಮಸೂದ್ ಅಜರ್ಗೆ ಮುಕ್ತ ಹಸ್ತ ನೀಡಿದೆ. ಹಾಗೇಯೇ ಅತಿಥ್ಯವನ್ನು ನೀಡಿದೆ.
ಮಸೂದ್ ಅಜರ್ ಯಾರು?
1968ರಲ್ಲಿ ಭಯೋತ್ಪಾದಕ ಮಸೂದ್ ಅಜರ್ ಅವರು ಹುಟ್ಟಿದ್ದು, ಅವರ ಪೂರ್ಣ ಹೆಸರು ಮೌಲಾನ್ ಮಸೂದ್ ಅಜರ್. ಪಾಕಿಸ್ತಾನದಲ್ಲಿ ಕುಳಿತು ಭಾರತದಲ್ಲಿ ಅನೇಕ ಭಯೋತ್ಪಾದಕ ಘಟನೆಗಳನ್ನು ನಡೆಸಿದ್ದಾನೆ. ಈತ ‘ಜೈಶ್-ಎ-ಮೊಹಮ್ಮದ್’ ಎಂಬ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ. ಈ ಭಯೋತ್ಪಾದಕ ಸಂಘಟನೆಯು ಭಾರತ ಮಾತ್ರವಲ್ಲದೆ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದೆ.
ವಿಶ್ವಸಂಸ್ಥೆಯು ಈಗಾಗಲೇ ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಆದರೆ ಎಲ್ಲಾ ನಿರ್ಬಂಧಗಳ ಹೊರತಾಗಿಯೂ, ಈ ಭಯೋತ್ಪಾದಕ ಸಂಘಟನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವರ್ಷಗಳ ಕಾಲ ಪ್ರವರ್ಧಮಾನಕ್ಕೆ ಬರುತ್ತಿತ್ತು. ಮಸೂದ್ ಅಜರ್ ತನ್ನ ಭಾರತ ವಿರೋಧಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾನೆ. ಹಲವು ವರ್ಷಗಳಿಂದ ಮಸೂದ್ ಅಜರ್ ತನ್ನ ದೇಶದಲ್ಲಿ ಇದ್ದಾನೆ ಎಂದು ನಂಬಲು ಪಾಕಿಸ್ತಾನ ನಿರಾಕರಿಸಿತ್ತು. ಆದರೆ ಇತ್ತೀಚೆಗಷ್ಟೇ ಮಸೂದ್ ಅಜರ್ನ ಆರೋಗ್ಯ ಹದಗೆಟ್ಟಿದ್ದು, ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಪಾಕಿಸ್ತಾನ ಒಪ್ಪಿಕೊಂಡಿತ್ತು.
1999ರಲ್ಲಿ ಭಯೋತ್ಪಾದಕ ಮಸೂದ್ನನ್ನು ಏಕೆ ಬಿಡುಗಡೆ ಮಾಡಲಾಯಿತು?
ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ. ಸೆಪ್ಟೆಂಬರ್ 2019 ರಲ್ಲಿ, ಭಾರತವು ಅಜರ್ ಮತ್ತು ಇನ್ನೊಬ್ಬ ಪಾಕಿಸ್ತಾನಿ ಭಯೋತ್ಪಾದಕ, ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್ ಅವರನ್ನು ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ‘ಭಯೋತ್ಪಾದಕರು’ ಎಂದು ಘೋಷಿಸಿತ್ತು. ಡಿಸೆಂಬರ್ 1999 ರಲ್ಲಿ, ಕಠ್ಮಂಡುವಿನಿಂದ ಕಂದಹಾರ್ಗೆ ವಿಮಾನವನ್ನು ಹೈಜಾಕ್ ಮಾಡಿ ಪ್ರಯಾಣಿಕರಿಗೆ ಬದಲಾಗಿ ಬಿಡುಗಡೆಯಾದ ಭಯೋತ್ಪಾದಕ ಮಸೂದ್ ಅಜರ್ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಸ್ಥಾಪಿಸಿದ್ದನು.