ಭಾರತ ಯಾವುದೇ ದೇಶದ ಮೇಲೆ ದಾಳಿ ಮಾಡುವುದಿಲ್ಲ. ಬೇರೆ ದೇಶಗಳು ದಾಳಿ ಮಾಡಿದರೆ ಅದನ್ನು ಸಹಿಸುವುದೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
ಗುಜುರಾತ್ನ ಅಹ್ಮದಾಬಾದ್ನಲ್ಲಿ ನಡೆದ ಜೈನ್ ಸಮುದಾಯದ ನಾಯಕರ ಸಮಾರಂಭವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. 1999ರ ಭಾರತ-ಪಾಕಿಸ್ತಾನ ಕಾರ್ಗಿಲ್ ಯುದ್ದದ ಸಂದರ್ಭವನ್ನು ಮುಂದಿಟ್ಟುಕೊಂಡು ಮಾತನಾಡಿದ ಅವರು, ನಮ್ಮ ಪೂರ್ವಿಕರು ತೋರಿಸಿಕೊಟ್ಟ ತಣ್ತೀಗಳನ್ನು ಎತ್ತಿಹಿಡಿಯುವ ಸಲುವಾಗಿ ಭಾರತವು ಈ ಹಿಂದೆ ತನ್ನ ವಿರುದ್ದ ಯುದ್ದ ಸಾರಿದ್ದ ಹಾಗೂ ಈಗ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೂ ಸಹಾಯಹಸ್ತ ಚಾಚಿದೆ ಎಂದಿದ್ದಾರೆ.
ಕಾರ್ಗಿಲ್ ಯುದ್ದದ ವೇಳೆ ನಮ್ಮ ನೆರೆಯ ರಾಷ್ಟ್ರದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದು ನಮಗೆ ಕಷ್ಟವೇನಿರಲಿಲ್ಲ. ಆದರೆ ನಮ್ಮ ಸೇನೆಗೆ ಗಡಿ ದಾಟಬಾರದೆಂಬ ಸ್ಪಷ್ಟ ಸೂಚನೆ ನೀಡಲಾಗಿತ್ತು. 2016ರಲ್ಲಿ ನಡೆದ ಸರ್ಜಿಕಲ್ ದಾಲೀ ವೇಳೆಯೂ ಇಡಿ ಪಾಕಿಸ್ಥಾನವನ್ನು ನಾವು ಗುರಿಯಾಗಿಸಲಿಲ್ಲ. ನಮಗೆ ತೊಂದರೆ ನೀಡಿದ್ದ ಗುಂಪು ಮಾತ್ರ ನಮ್ಮ ಗುರಿಯಾಗಿತ್ತು. ಎಂದು ಭಾಗವತ್ ಹೇಳಿದ್ದಾರೆ.