- ಐಶ್ಚರ್ಯ ರೈ ತಮ್ಮ ತಾಯಿ ಬೃಂದಾ ರೈ ಅವರ ಬರ್ತ್ ಡೇ ಸೆಲೆಬ್ರೇಷನ್
- ತಮ್ಮ ತಾಯಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಶ್ವರ್ಯ ರೈ
ಮಾಜಿ ವಿಶ್ವ ಸುಂದರಿ ಐಶ್ಚರ್ಯ ರೈ ಬಚ್ಚನ್ ತಮ್ಮ ತಾಯಿ ಬೃಂದಾ ರೈ ಅವರ ಬರ್ತ್ ಡೇ ಸೆಲೆಬ್ರೇಷನ್ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾರೆ. ಐಶ್ವರ್ಯ ರೈ, ಅವರ ತಾಯಿ, ಮಗಳು ಆರಾಧ್ಯ ಮತ್ತು ಕೆಲವು ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಪೋಸ್ ಕೊಟ್ಟಿರುವುದನ್ನು ಕಾಣಬಹುದು. ಹುಟ್ಟುಹಬ್ಬದ ಕೇಕ್ ನೊಂದಿಗೆ ಪೋಸ್ ಕೊಟ್ಟು ಶುಭಾಶಯ ತಿಳಿಸಿದ್ದಾರೆ.”ಲವ್ ಯು ಬರ್ತ್ ಡೇ ಗರ್ಲ್, ಡಿಯರ್ ಮ್ಮಮಿ ಎಂದು ಐಶ್ವರ್ಯಾ ರೈ ಬಚ್ಚನ್ ಬರೆದಿದ್ದಾರೆ. ತಮ್ಮ ತಾಯಿಯ ಫೋಟೋ ವನ್ನು ಹಂಚಿಕೊಂಡ ಐಶ್ವರ್ಯ ರೈ ಮತ್ತೊಂದು ಪೋಸ್ಟ್ನಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಅಮ್ಮ. ನಿನ್ನನ್ನು ಶಾಸ್ವತವಾಗಿ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.