ಈ ಕಡೆ ರೈಗೆ ವಿಚ್ಚೇದನ.. ಆ ಕಡೆ ಅಭಿಷೇಕ್- ನಿಮ್ರತ್ ಮದ್ವೆ..??
ಐಶ್ವರ್ಯಾ ರೈ.. 50ರ ಹರೆಯದ ಈ ಚೆಲುವೆ ಅಕ್ಷರಶಃ ಸೌಂದರ್ಯ ದೇವತೆ. ಇಂದಿಗೂ ಆಕೆಯ ಮುಖದಲ್ಲಿನ ತ್ವಚೆ, ಕಾಂತೀಯತೆ ಕಿಂಚಿತ್ತೂ ಕುಗ್ಗಿಲ್ಲ. ವಿಶ್ವಸುಂದರಿ ಅನ್ನೋ ಪಟ್ಟ ಪಡೆದಾಗಿನಿಂದ ಇಂದಿನವರೆಗೂ ಈ ಕರಾವಳಿಯ ಚೆಂದುಳ್ಳಿ ಮಾತ್ರ ಅದೆಷ್ಟು ಮಂದಿಯ ನಿದ್ದೆ ಕೆಡಿಸಿದ್ದಾರೋ ಏನೋ. ಬಾಲಿವುಡ್ ಶೆಹೆನ್ಷಾ ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆ ಆಗ್ತಾರೆ, ಅಭಿಷೇಕ್ ಕೈ ಹಿಡೀತಾರೆ ಅಂದಾಗ ಹೆಂಗೆಳೆಯರ ಹಾರ್ಟ್ಗಳು ಭಾರಗೊಂಡಿದ್ದವು. ಮದ್ವೆ, ಮಗು, ಫ್ಯಾಮಿಲಿ ಅಂತ ಆಕೆ ಚಿತ್ರರಂಗದಿಂದ ಸಣ್ಣದೊಂದು ಗ್ಯಾಪ್ ಪಡೆದಾಗಲೂ ಆಕೆಯ ಸ್ಟಾರ್ಡಮ್ ರಾಗಿ ಕಾಳಿನಷ್ಟೂ ಕಮ್ಮಿ ಆಗಲಿಲ್ಲ. ಆದ್ರೀಗ ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ರಿಂದ ಡಿವೋರ್ಸ್ ಪಡೆಯಲಿದ್ದಾರೆ ಅನ್ನೋ ಸುದ್ದಿ ಮಾತ್ರ ಆಕೆಯ ಅಭಿಮಾನಿಗಳು, ಕುಟುಂಬಸ್ಥರು, ಹಿತೈಷಿಗಳನ್ನ ಇನ್ನಿಲ್ಲದೆ ಭಾದಿಸುತ್ತಿದೆ.
ಇತ್ತೀಚೆಗೆ ಅವಾರ್ಡ್ ಫಂಕ್ಷನ್ವೊಂದರಲ್ಲಿ ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್ಕುಮಾರ್ ಕಾಲಿಗೆ ನಮಸ್ಕರಿಸುತ್ತಾ ಸಂಸ್ಕಾರ ಮೆರೆದ ಐಶ್ ಪುತ್ರಿ, ನ್ಯಾಷನಲ್ ಲೆವೆಲ್ನಲ್ಲಿ ಸುದ್ದಿಯಾದ್ರು. ಆಕೆಯನ್ನ ಹಾಗೆ ಬೆಳೆಸಿದಂತಹ ಐಶ್ವರ್ಯಾ ಬಗ್ಗೆ ಕೂಡ ಇಡೀ ದೇಶ ಕೊಂಡಾಡಿತು. ಅದರ ಬೆನ್ನಲ್ಲೀಗ ಐಶ್-ಅಭಿ ದಾಂಪತ್ಯ ಜೀವನ ಅಂತ್ಯ ಎನ್ನಲಾಗ್ತಿದೆ. ಈ ಕುರಿತ ವದಂತಿಗಳು ಬಹಳ ದಿನಗಳಿಂದ ಹರಿದಾಡ್ತಿತ್ತು.
ಅದಕ್ಕೆ ಪುಷ್ಟಿ ನೀಡುವಂತೆ ಆಗಾಗ ಸಾರ್ವಜನಿಕ ವೇದಿಕೆಗಳಲ್ಲಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ರೈ ಬಚ್ಚನ್, ಅಭಿಷೇಕ್ ಜೊತೆಗೆ ಬಾರದೆ ಪ್ರತ್ಯೇಕವಾಗಿ ಬಂದು ಕ್ಯಾಮೆರಾಗೆ ಪೋಸ್ ನೀಡ್ತಿದ್ರು. ಅಂಬಾನಿ ಮಗನ ಮದ್ವೆಯಲ್ಲೂ ಅದೇ ಆಗಿತ್ತು. ಐಶ್ ಪುತ್ರಿಯೊಂದಿಗೆ ಬಂದ್ರೆ, ಅಭಿ ತಂದೆ ಬಿಗ್ ಬಿ, ತಾಯಿ ಜಯಾ ಬಚ್ಚನ್ ಜೊತೆ ಎಂಟ್ರಿ ಕೊಟ್ಟಿದ್ದರು.
ಇಷ್ಟಕ್ಕೂ ಡಿವೋರ್ಸ್ ಪಡೆಯೋ ಅಂತಹ ಪ್ರಮೇಯ ಐಶ್ವರ್ಯಾ ರೈಗೆ ಬಂದಿದ್ದಾದ್ರೂ ಏಕೆ..? ಅಭಿಷೇಕ್- ಐಶ್ವರ್ಯಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾರಣವಾದ ಅಂಶವಾದ್ರೂ ಏನು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ಮೊದಲಿಗೆ ಬರೋದೇ ನಿಮ್ರತ್ ಕೌರ್ ಹೆಸರು. ಅಫ್ಕೋರ್ಸ್ ಒಂದು ಸುಂದರವಾದ ಸಂಸಾರ ಒಡೆಯಲು ಮೂರನೇ ವ್ಯಕ್ತಿಯ ಆಗಮನ ಇದ್ದೇ ಇರಲಿದೆ. ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಹರಿದಾಡ್ತಿರೋ ಸುದ್ದಿ ಏನಪ್ಪಾ ಅಂದ್ರೆ, ಅಭಿಷೇಕ್ ಬಚ್ಚನ್ ತನ್ನ ಕೊನೆಯ ಸಿನಿಮಾ ದಸ್ವಿಯಲ್ಲಿ ನಟಿಸಿದ್ದ ಸಹನಟಿ ನಿಮ್ರತ್ ಕೌರ್ ಅವ್ರೇ ಐಶ್ ವಿಚ್ಚೇದನಕ್ಕೆ ಕಾರಣಕರ್ತೆ. ಹೌದು.. ಅಭಿಷೇಕ್ ಬಚ್ಚನ್ ತನ್ನ ಸಹನಟಿ ನಿಮ್ರತ್ ಕೌರ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ರು ಎನ್ನಲಾಗಿದೆ. ಆ ವಿಷಯ ಐಶ್ವರ್ಯಾ ರೈಗೆ ತಿಳಿಯುತ್ತಾ ಇದ್ದಂತೆ ಪುತ್ರಿಯೊಂದಿಗೆ ಪ್ರತ್ಯೇಕವಾಗಿ ವಾಸ ಮಾಡಲು ಶುರು ಮಾಡಿದ್ರಂತೆ ಐಶ್. ಕೊನೆಗೆ ತನ್ನ ತಪ್ಪಿನ ಅರಿವಾಗಿ ನಿಮ್ರತ್ನಿಂದ ಹೊರಬಂದು ಒಂದು ಚಾನ್ಸ್ ಕೊಡು, ಮತ್ತೆ ಹೀಗೆಂದೂ ಆಗದಂತೆ ನೋಡಿಕೊಳ್ತೇನೆ ಅಂದರಂತೆ ಐಶ್ ಪತಿ ಅಭಿಷೇಕ್. ಆದ್ರೆ ಘಾಡವಾಗಿ ನೊಂದಿದ್ದ ಐಶ್ ಮಾತ್ರ ತಮ್ಮ ಅಚಲವಾದ ನಿರ್ಧಾರವನ್ನ ಬದಲಾಯಿಸಿಲ್ಲ.
ನಿಮ್ರತ್ ಕೌರ್ ಯಾವಾಗ ಐಶ್ವರ್ಯಾ- ಅಭಿ ದಾಂಪತ್ಯಕ್ಕೆ ಎಂಟ್ರಿ ಕೊಟ್ಟರೋ, ಆಗಲಿಂದಲೇ ಇವ್ರ ನಡುವೆ ಬಿರುಕು ಮೂಡಿದೆ. ಸಹಬಾಳ್ವೆಗೆ ಅಭಿಷೇಕ್ ಒಪ್ಪಿದರೂ ಸಹ, ಮನಸ್ಸು ಮುರಿದುಕೊಂಡಿರೋ ಐಶ್ವರ್ಯಾ ಒಪ್ಪುತ್ತಿಲ್ಲವಂತೆ. ಇನ್ನು ಇದನ್ನೆಲ್ಲಾ ನೋಡ್ತಿರೋ ಅಮಿತಾಬ್- ಜಯಾ ಬಚ್ಚನ್ ಕೂಡ ದಂಪತಿಯನ್ನ ಒಂದು ಮಾಡದೆ ಮೌನ ತಾಳಿರೋದು ಹತ್ತು ಹಲವು ಅನುಮಾನಗಳಿಗೆ ಆಸ್ಪದೆ ನೀಡಿದೆ.
ಇವೆಲ್ಲಾ ಬೆಳವಣಿಗೆಗಳ ಬೆನ್ನಲ್ಲಿ ದಸ್ವಿ ಚಿತ್ರದ ಪ್ರಚಾರದ ವೇಳೆಯ ವಿಡಿಯೋ ಒಂದನ್ನ ನೆಟ್ಟಿಗರು ಈಗ ವೈರಲ್ ಮಾಡ್ತಿದ್ದಾರೆ. ಸಿನಿಮಾದ ಪ್ರಮೋಷನ್ಸ್ ವೇಳೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ದಾಂಪತ್ಯದ ಬಗ್ಗೆ ಪ್ರಶ್ನೆ ಮಾಡಿದವರಿಗೆ ಅಭಿ ಬದಲಿಗೆ ನಿಮ್ರತ್ ಉತ್ತರ ಕೊಟ್ಟಿದ್ದರು. ‘ಈಗಿನ ಕಾಲದ ಮದ್ವೆಗಳು ಎಲ್ಲಿ ಸುದೀರ್ಘವಾಗಿ ಉಳಿಯಲಿವೆ’ ಅಂದಿದ್ದರು ನಿಮ್ರತ್. ಆಗ ನಿಮ್ರತ್ ಕಡೆ ಅಬಿಷೇಕ್ ಕೊಟ್ಟ ಲುಕ್ಗೆ, ನಾನು ತಮಾಷೆಗೆ ಹಾಗಂದೆಯಷ್ಟೇ. ಯಾರ ಮನಸ್ಸನ್ನೂ ನೋಯಿಸೋ ಉದ್ದೇಶ ನನಗಿಲ್ಲ ಅಂದಿದ್ರು ನಿಮ್ರತ್. ಮುಂದುವರೆದು, ತನ್ನ ಮದುವೆ ಬಗ್ಗೆಯೂ ಮಾತನಾಡಿದ್ದ ನಿಮ್ರತ್, ನನಗೆ ಸೂಕ್ತವಾದ ವ್ಯಕ್ತಿ ಸಿಕ್ಕರೆ ಆಗ್ತೀನಿ. ಮದ್ವೆ ಅನ್ನೋದು ಪ್ಲ್ಯಾನ್ ಮಾಡಿ ಆಗೋದಲ್ಲ. ಅದು ಸಹಜವಾಗಿಯೇ ಕೂಡಿ ಬರಬೇಕು ಎಂದಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದ್ದು, ಅರೇ.. ಅದೇನಾ ಅಸಲಿ ಮ್ಯಾಟರ್ ಅಂತ ಎಲ್ರೂ ಹುಬ್ಬೇರಿಸ್ತಿದ್ದಾರೆ.
ಒಟ್ಟಾರೆ ಐಶ್- ಅಭಿ ದಾಂಪತ್ಯಕ್ಕೆ ನಿಮ್ರತ್ ಎಂಟ್ರಿ ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ನಿಂಬೆಹುಳಿ ಹಿಂಡಿದಂತಾಗಿದೆ. ಮತ್ತೊಂದು ಕಡೆ ಕೇಳಿಬರ್ತಿರೋ ರೂಮರ್ಸ್ ಏನಪ್ಪಾಂದ್ರೆ, ಒಂದ್ಕಡೆ ಐಶ್ಗೆ ಡಿವೋರ್ಸ್ ನೀಡಲಿರೋ ಅಭಿಷೇಕ್, ಮತ್ತೊಂದ್ಕಡೆ 42 ವರ್ಷದ ನಿಮ್ರತ್ ಜೊತೆ ಎರಡನೇ ಮದ್ವೆಗೆ ತಯಾರಾಗ್ತಿದ್ದಾರೆ ಎನ್ನಲಾಗ್ತಿದೆ. ಇದು ನಿಜವಾದಲ್ಲಿ ಐಶ್ವರ್ಯಾಗೂ ಕೂಡ ಸಲ್ಮಾನ್ ಖಾನ್ ಅಂತಹ ಪ್ರೇಮಿಯನ್ನ ಕಳೆದುಕೊಂಡ ಬಗ್ಗೆ ಪಶ್ಚಾತ್ತಾಪ ಕಾಡುವುದರಲ್ಲಿ ಅನುಮಾನವೇ ಇಲ್ಲ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್