- ಜೂನ್ 1 ರಿಂದ 6 ರ ವರೆಗೆ ಮದ್ಯದ ಮಾರಾಟ ಬಂದ್
- ಆದೇಶ ಹೊರಡಿಸಿದ ಬೆಂಗಳೂರು ಜಿಲ್ಲಾಡಳಿತ
- ಜೂನ್ 3 ರಂದು ಪದವೀಧರ ಕ್ಷೇತ್ರಗಳಿಗೆ ಮತದಾನ
ಮದ್ಯಪ್ರಿಯರಿಗೆ ಜೂನ್ ಮೊದಲ ವಾರ ಬಿಗ್ ಶಾಕ್ ಕಾದಿದೆ. ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಮತ ಎಣಿಕೆ ಇರುವುದರಿಂದ ಜೂನ್ 1 ರಿಂದ 6 ರ ವರೆಗೆ ಮದ್ಯದ ಮಾರಾಟ ಬಂದ್ ಇರಲಿದೆ. ಈ ಬಗ್ಗೆ ಬೆಂಗಳೂರು ಜಿಲ್ಲಾಡಳಿತದಿಂದ ಆದೇಶ ಹೊರಡಿಸಿದೆ.
ಜೂನ್ 1 ರಿಂದ 6ರವರೆಗೆ ಬೆಂಗಳೂರಿನ ಎಲ್ಲಾ ಎಣ್ಣೆ ಅಂಗಡಿಗಳು ಸಂಪೂರ್ಣವಾಗಿ ಬಂದ್ ಇರಲಿವೆ. ಜೂನ್ 3 ರಂದು ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1 ಸಾಯಂಕಾಲ 4 ಗಂಟೆಯಿಂದ ಜೂನ್ 3 ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.